ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಮಾನವಿಕ ಸಂಘ ಮತ್ತು ಯೂತ್ ರೆಡ್ ಕ್ರಾಸ್ ಸೊಸೈಟಿಯ ಆಶ್ರಯದಲ್ಲಿ ಮಾನವಿಕ ವಿದ್ಯಾರ್ಥಿಗಳಿಗೆ ಫೆಬ್ರವರಿ 12ರಂದು ಪರ್ಲಡ್ಕದಲ್ಲಿರುವ ಡಾ| ಶಿವರಾಮ ಕಾರಂತ ಬಾಲವನ ಕ್ಷೇತ್ರಕ್ಕೆ ಸಂದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸುಮಾರು ಅರವತ್ತು ವಿದ್ಯಾರ್ಥಿಗಳು ಭಾಗವಹಿದ್ದರು. ಕಾರಂತರು ವಾಸಿಸುತ್ತಿದ್ದ ಮನೆ, ಬಳಸುತ್ತಿದ್ದ ದೈನಂದಿನ ಪರಿಕರಗಳು, ಗ್ರಂಥಾಲಯ, ಆರ್ಟ್ ಗ್ಯಾಲರಿ, ನಾಟ್ಯ ಶಾಲೆ ಮೊದಲಾದವುಗಳ ಮಾಹಿತಿ ಪಡೆದು ಕೊಂಡರು. ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ| ಸುಬೇರ್, ಡಾ| ನಾರ್ಬರ್ಟ್ ಮಸ್ಕರೇನ್ಹಸ್, ವೆಂಕಟೇಶ್ವರಿ ಕೆ. ಎಸ್, ಭರತ್ ಕುಮಾರ್ ಎ, ಜ್ಯೋತಿ, ತಾರಾ ಮತ್ತು ರಶ್ಮಿ ವಿನಾಯಕ್ ವಿದ್ಯಾರ್ಥಿಗಳ ಜೊತೆಗಿದ್ದು, ಸಹಕರಿಸಿದರು.