ಮಂಗಳೂರು: ಕರಾವಳಿಯ ಬ್ಯಾಂಕ್‌ಗಳನ್ನು ಉಳಿಸಿ - ಹೋರಾಟ ಸಮಿತಿ

ಮಂಗಳೂರು: ಕರಾವಳಿ ಬ್ಯಾಂಕ್ ಉಳಿಸಲು ಹಕೊತ್ತಾಯ ಸಭೆ ಮತ್ತು ರಾಜಕೀಯ ನಾಯಕರುಗಳಿಗೆ ಆಹ್ವಾನ : ದಿನಾಂಕ 20 -02-2020 ರಂದು ಮಂಗಳೂರು ಕೊಡಿಯಾಲ್ ಬೈಲ್ ನಲ್ಲಿರುವ ಶಾರದಾ ಶಾಲೆಯ ಎದುರಿನಲ್ಲಿರುವ ಸಿ ಬಿ ಒ ಹಾಲ್ ನಲ್ಲಿ ಬೆಳಿಗ್ಗೆ 10 ಗಂಟೆಗೆ ಕರಾವಳಿಯ ಸಮಾನ ಮನಸ್ಕ ಸಂಘ ಸಂಸ್ಥೆಗಳು ಕರಾವಳಿಯ ಸಿಂಡಿಕೇಟ್ ಮತ್ತು ಕಾರ್ಪೊರೇಷನ್ ಬ್ಯಾಂಕನ್ನು ಉಳಿಸಬೇಕಾಗಿ ಹಕ್ಕೊತ್ತಾಯ ಸಭೆಯನ್ನು ನಡೆಸಲು ಉದ್ದೇಶಿಸಿದ್ದೇವೆ. ಈ ಸಭೆಗೆ ಕರಾವಳಿಯ ಎಲ್ಲಾ ರಾಜಕೀಯ ಮುಖಂಡರುಗಳನ್ನು ಆಹ್ವಾನಿಸುತ್ತಿದ್ದೇವೆ. 

ಬೈಕ್ ರ್ಯಾಲಿ ನಡೆಸಿ ಸಂಸದರುಗಳ ಆಹ್ವಾನ: ಬ್ಯಾಂಕ್ ಗಳನ್ನು ಉಳಿಸುವ ಈ ಹಕ್ಕೊತ್ತಾಯ ಸಭೆಗೆ ಕರಾವಳಿಯ ಮೂರು ಜಿಲ್ಲೆಗಳ ಸಂಸದರುಗಳನ್ನು ಬೈಕ್ ರ್ಯಾಲಿ ಮೂಲಕ ಹೋಗಿ ಆಹ್ವಾನಿಸಲಾಗುವುದು. ಕರಾವಳಿಯನ್ನು ಪ್ರತಿನಿಧಿಸುವ ನಮ್ಮ ಸಂಸದರುಗಳು ಬ್ಯಾಂಕುಗಳನ್ನು ಉಳಿಸುವಲ್ಲಿ ನಾವು ನಡೆಸುತ್ತಿರುವ ಹೋರಾಟದಲ್ಲಿ ನಾಯಕತ್ವವನ್ನೇ ವಹಿಸಿಕೊಳ್ಳಬೇಕೆಂದೂ ಮತ್ತು ಕರಾವಳಿಯ ಹಿತಾಸಕ್ತಿಗೆ ವಿರುದ್ಧವಾದ ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟಿಸಬೇಕೆಂದೂ ಕರಾವಳಿಯ ಬ್ಯಾಂಕುಗಳನ್ನು ವಿಲೀನಗೊಳಿಸಲು ಆರಂಭಿಸಿರುವ ಪ್ರಕ್ರಿಯೆಯನ್ನು ರದ್ದುಗೊಳಿಸಲು ಈ ಸಭೆಯಲ್ಲಿ ಒತ್ತಾಯ ಮಾಡಲಾಗುವುದು. ಅಲ್ಲವೇ ಕರಾವಳಿಯ ಮೂರು ಜಿಲ್ಲೆಗಳ ಎಲ್ಲಾ ಪಕ್ಷದ ನಾಯಕರನ್ನು ಕೂಡಾ ಸಭೆಗೆ ಆಹ್ವಾನಿಸುತ್ತಿದ್ದೇವೆ. ಕರಾವಳಿಯ ಎರಡು ರಾಷ್ಟ್ರೀಕೃತ ಬ್ಯಾಂಕ್‌ಗಳಾದ ಸಿಂಡಿಕೇಟ್ ಮತ್ತು ಕಾರ್ಪೊರೇಷನ್ ಬ್ಯಾಂಕನ್ನು ಇತರ ಬ್ಯಾಂಕ್ ಗಳೊಂದಿಗೆ ವಿಲೀನಗೊಳಿಸುವ ಉದ್ದೇಶವನ್ನು ಕಳೆದ ಆಗೋಸ್ಟ್ 30 2019 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ ರವರು ಪತ್ರಿಕಾ ಘೋಷ್ಟಿಯಲ್ಲಿ ಪ್ರಕಟಿಸಿರುತ್ತಾರ್. ಸರಕಾರದ ಈ ನಿರ್ಧಾರ ಕರಾವಳಿ ಭಾಗದ ಈ ಜನರ ಆರ್ಥಿಕ ಬೆಳವಣಿಗೆಗೆ ತೊಂದರೆಯುಂಟುಮಾಡುವಂತಹ ಆಘಾತಕಾರಿ ನಿರ್ಧಾರವಾಗಿದೆ. 

ಕ್ಯಾಬಿನೇಟ್ ನಿರ್ಧಾರವಾಗಿಲ್ಲ: ಕರಾವಳಿಯ 2 ಬ್ಯಾಂಕ್ ಗಳನ್ನು ವಿಲೀನಗೊಳಿಸುವ ಬಗ್ಗೆ ಕ್ಯಾಬಿನೇಟ್ ನಲ್ಲಿ ನಿರ್ಧಾರವಾಗಲಿಲ್ಲ ಮತ್ತು ಆ ಬಗ್ಗೆ ನೋಟಿಫಿಕೇಶನ್ ಕೂಡಾ ಆಗಿಲ್ಲ. ಆನರಿಂದ ಯಾವುದೇ ಪ್ರತಿರೋಧ ಅಥವಾ ಪ್ರತಿಭಟನೆಗಳು ನಡೆಸಬಾರದು ಎನ್ನುವ ಉದ್ದೇಶದಿಂದ ಜನರನ್ನು ದಾರಿತಪ್ಪಿಸುವ ರೀತಿಯಲ್ಲಿ ಕೇಂದ್ರ ಹಣಕಾಸು ಸಚಿವರು ಪತ್ರಿಕಾಗೋಷ್ಟಿ ಮಾಡಿ ವಿಲೀನ ಪ್ರಕ್ರಿಯೆ ಸಂಪೂರ್ಣಗೊಂಡಿದೆ ಎಂಬ ಭಾವನೆಯನ್ನು ಸೃಷ್ಟಿ ಮಾಡಿರುತ್ತಾರೆ. ಕರಾವಳಿ ಬ್ಯಾಂಕ್ ಗಳು ವಿಲೀನಗೊಂಡರೆ ಕರಾವಳಿ ಆರ್ಥಿಕ ಸಂಕಷ್ಟದಲ್ಲಿ: ಪ್ರಸ್ತುತ ವಿಲೀನಕ್ಕೆ ಒಳಗಾಗುವ ಎರಡು ಬ್ಯಾಂಕುಗಳಾದ ಸಿಂಡಿಕೇಟ್ ಮತ್ತು ಕಾರ್ಪೊರೇಷನ್

ಜಿಲ್ಲಾ ಕೇಂದ್ರದಲ್ಲಿ ಇರುವುದು ಗ್ರಾಮೀಣ ಹಾಗೂ ಜಿಲ್ಲಾ ಪ್ರದೇಶದಲ್ಲಿರುವುದು ಒಂದು ಹೆಮ್ಮೆಯ ವಿಚಾರ, ಬ್ಯಾಂಕುಗಳ ಆಡಳಿತ ಕಛೇರಿಗಳು ಇದ್ದಾಗ ಆ ಪ್ರದೇಶಕ್ಕೆ ಪೂರಕ ಯೋಜನೆಗಳು  ಬರುವುದೂ ಕೂಡಾ ಸಾಮಾನ್ಯ. ಅದೇ ರೀತಿ ಅಭಿವೃದ್ಧಿ ನಡೆಯುತ್ತದೆ. ಬ್ಯಾಂಕುಗಳು ವಿಲೀನಗೊಂಡಲ್ಲಿ ಅದರ ಆಡಳಿತ ಕಛೇರಿಗಳು ಇಚ್ಚಕ್ಕಜಿ. ಗಾಗಿ ಕರಾವಳಿ ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುವುದೇ ಅಲ್ಲದೇ ಈ ನಾಡಿನಲ್ಲಿ ಬ್ಯಾಂಕಿಗೆ ಇರಕವಾಣಿ ಉದ್ಯಮಗಳು ಮುಚ್ಚುಗಡೆಯಾಗುವ ಮತ್ತು ಪ್ರಸ್ತುತ ಇರುವ ಉದ್ಯಮಗಳು ಕೃ.ರಾ ಅರ್ಥಿಕ ನಷ್ಟವನ್ನು ಹೊಂದಿ ಮುಂಬರುವ ದಿನಗಳಲ್ಲಿ ನಿರುದ್ಯೋಗ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. 

ಕರಾವಳಿಯ ರಾಜಕೀಯ ನಾಯಕರ ನಿರ್ಲಕ್ಷ್ಯತನ ಮತ್ತು ನಿರಾಸಕ್ತಿ: ಕರಾವಳಿಯ ಆರ್ಥಿಕ ಬೆಳವಣಿಗೆಗೆ ನತ್ತು ಕರಾವಳಿಯನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮತ್ತು ಕರಾವಳಿಯಲ್ಲಿ ಹುಟ್ಟಿದ ರಾಷ್ಟ್ರೀಕೃತ ಬ್ಯಾಂಕುಗಳನ್ನು ಸರಕಾರವು ಒಲೀಗದ ಕೆಸರಿನ ಒಂದೊಂದಾಗಿ ಅಳಿಸಿ ಹಾಕುತ್ತಿದ್ದರೂ ಕರಾವಳಿಯ ರಾಜಕೀಯ ಪಕ್ಷದ ನಾಯಕರು ಬರದ ವಿರುದ್ಧ ತೀವ್ರತರವಾದ ಪ್ರತಿಭಟನೆಗಳನ್ನು ನಡೆಸದೇ ಇರುವುದು ನೋಡುವಾಗ ನಮ್ಮ ರಾಜಕೀಯ ನಾಯಕರುಗಳು ಕರಾವಳಿಯ ಅಭಿವೃದ್ಧಿಯನ್ನು ನಿರ್ಲಕ್ಷಿಸುತ್ತಿದ್ದಾರೆ ಎನ್ನುವ ಭಾವನೆ ಬರುತ್ತದೆ. ಆಡಳಿತ ಪಕ್ಷದವರು ಯಾವುದೋ ಪ್ರಭಾವಕ್ಕೆ ಒಳಗಾಗಿ ಕರಾವಳಿಯ ಹಿತಾಸಕ್ತಿಗೆ ವಿರುದ್ಧವಾದ ನಿರ್ಧಾರವನ್ನು ಕೈಗೊಂಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಆಡಳಿತ ಪಕ್ಷದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿ ಬ್ಯಾಂಕ್ ಗಳನ್ನು ರಕ್ಷಿಸಬೇಕಾದವರು ವೈದ ಪಕ್ಷದವರು. ಕರಾವಳಿಯ ರಾಜಕೀಯ ನಾಯಕರೆಲ್ಲಾ ಒಗ್ಗಟ್ಟಾಗಿ ಸರ್ಕಾರದ ನಿರ್ಧಾರವನ್ನು ಬದಲಿಸಲು ಪ್ರಯತ್ನಿಸುತ್ತಾರೆ ಎಂದು ನಂಬಿದ್ದೆವು. ಬ್ಯಾಂಕುಗಳನ್ನು ಉಳಿಸುವಲ್ಲಿ ಒರೊಧ ಪಕ್ಷದ ನಾಯಕರುಗಳು ಕೂಡಾ ಯಾವುದೇ ಪ್ರಯತ್ನವನ್ನು ಮಾಡುತ್ತಿಲ್ಲ. ಇದನ್ನು ನೋಡಿದಾಗ ನಮ್ಮ ನಾಯಕರುಗಳು ಕರಾವಳಿಯ ಅಭಿವೃದ್ಧಿಯ ಬಗ್ಗೆ ಯಾವುದೇ ಕಾಳಜಿಯನ್ನು ವಹಿಸುತ್ತಿಲ್ಲ ಎಂಬುವುದು ಸ್ಪಷ್ಟವಾಗುತ್ತದೆ.

You can share this post!

ಮಂಗಳೂರು : ಫೆ.15ರಂದು ಮಂದಾರರಾಮಾಯಣ-ಇತಿಹಾಸ ಮತ್ತು ಸಂಸ್ಕೃತಿ ಶೋಧ

ಕಿನ್ನಿಗೋಳಿ: ಐಕಳ ಪೊಂಪೈ ಕಾಲೇಜಿನ ಆವರಣದಲ್ಲಿ ಪೊಂಪೈ ಕಾಲೇಜು ಆಯೋಜಕತ್ವದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ (ಉಡುಪಿ ವಲಯ ) ಅಂತರ್ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾಟ

Leave Comments