ಮಂಗಳೂರು:- ಸರಕಾರ ಆದಾಯ ತೆರಿಗೆ ಕಛೆರಿಯನ್ನು ಮಂಗಳೂರಿನಿಂದ ಗೋವಾಕ್ಕೆ ಸ್ಥಳಾಂತರ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಶಾಸಕರಾದ ಯು ಟಿ‌ ಖಾದರ್, "ಬಿಜೆಪಿಯ ಜನವಿರೋಧಿ ನೀತಿಗೆ ಕಾಂಗ್ರೆಸ್ ಪ್ರತಿಯೊಂದು ಹಂತದಲ್ಲಿಯೂ ‌ವಿರೋಧಿಸುತ್ತದೆ. ಕರ್ನಾಟಕ ಮಾತ್ರ ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ. ಕೇಂದ್ರ ರಾಜ್ಯದಲ್ಲಿ ಬಿಜೆಪಿ ಸರ್ಕಾರ‌ ಇದ್ದು ಜಿಲ್ಲೆಗೆ ವಿವಿಧ ಯೋಜನೆಗಳನ್ನು ತರಬೇಕು. ಆದರೆ ಬಿಜೆಪಿ ‌ಮಾಡುತ್ತಿರುವುದು ಖಾಸಗೀಕರಣ ಮತ್ತು ವಿವಿಧ ಇಲಾಖೆ, ಸಂಸ್ಥೆಗಳ ‌ಸ್ಥಳಾಂತರ.‌ ಈ ಮೂಲಕ ಜಿಲ್ಲೆಯ ಜನತೆಗೆ ದ್ರೋಹ ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ. ಶಾಸಕರು, ಸಂಸದರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಬೇಕು ಆದ್ರೆ ಇವರು‌ ಮಾಡುವುದು ಜಿಲ್ಲೆಯ ಜನತೆಗೆ ದ್ರೋಹ" ಎಂದು ಕಿಡಿಕಾರಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ಐವನ್ ಡಿಸೋಜ, ಜೆ.ಆರ್.ಲೊಬೋ, ನವೀನ್ ದೀಸೋಜಾ, ಟಿ.ಕೆ ಸುಧೀರ್, ಶಶೀಧರ್ ಹೆಗ್ಡೆ,‌ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.