ಮಂಗಳೂರು:  ಕುಸ್ತಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್‌ರನ್ನು ಬಂಧಿಸಿ ಕ್ರಮ ಕೈಗೊಳ್ಳುವ ಬದಲು ದೇಶದ ಗೌರವ ಹೆಚ್ಚಿಸಿದ ಕುಸ್ತಿ ಪಟುಗಳ ಮೇಲೆ  ಪೋಲಿಸ್ ದೌರ್ಜನ್ಯ ನಡೆಸಿದ ಪ್ರಧಾನಿ ಮೋದಿ ಸರಕಾರದ ವಿರುದ್ಧ ಸಿಪಿಎಂ ಎಡ ಪಕ್ಷಗಳವರು ಮಂಗಳೂರು ಗಡಿಯಾರ ಗೋಪುರದ ಬಳಿ ಪ್ರತಿಭಟನೆ ನಡೆಸಿದರು.

ಸಮುದಾಯ, ಜನವಾದಿ, ಎಐಟಿಯುಸಿ, ಸಿಪಿಎಂ, ಸಿಪಿಐ ಎಂದು ಹಲವಾರು ಎಡವಾದಿ ಸಂಘಟನೆಗಳವರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದರು. ರೈತ ಸಂಘದ ಸನ್ನಿ ಡಿಸೋಜಾ ಮೊದಲಾದವರು ಸಹ ಭಾಗವಹಿಸಿದರು. ಮೊದಲು ಗುಂಪಾಗಿ ಎಲ್ಲರೂ ಪ್ರಧಾನಿ ಮೋದಿ, ಬ್ರಿಜ್ ಭೂಷಣ್, ಬಿಜೆಪಿಗೆ ಧಿಕ್ಕಾರ ಕೂಗಲಾಯಿತು.

ಸುನಿಲ್ ಕುಮಾರ್ ಬಜಾಲ್ ಅವರು ಮಾತನಾಡಿ ಜಗತ್ತಿನಲ್ಲಿ ‌ದೇಶದ ಕೀರ್ತಿ ಪತಾಕೆ ಹಾರಿಸಿದ ಕುಸ್ತಿ ಪಟುಗಳ ತಿಂಗಳ ಹೋರಾಟವನ್ನು ಸಹ ಈ ಪ್ರಧಾನಿ ಮೋದಿ ಅವರು ಗಮನಿಸುತ್ತಿಲ್ಲ. ಇದು ಯಾವ ಭೇಟಿ ಎಂದು ಅವರು ಖಂಡಿಸಿದರು.

ವಾಸುದೇವ ಉಚ್ಚಿಲ, ಪದ್ಮಾವತಿ ಶೆಟ್ಟಿ, ಯಾದವ ಶೆಟ್ಟಿ, ತಿಮ್ಮಪ್ಪ ಕಾವೂರು, ಸುಲೋಚನ ಕವತ್ತಾರ್, ಬಿ. ಕೆ. ಇಮ್ತಿಯಾಜ್ ಎಂದು ವಿಚಾರವಾದಿಗಳ ತಂಡವು ಸಕ್ರಿಯವಾಗಿ ಭಾಗವಹಿಸಿ ಕೂಡಲೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.

80ಕ್ಕೂ ಹೆಚ್ಚು ಕ್ರಿಮಿನಲ್ ಮೊಕದ್ದಮೆ ಹಾರಿಸಿಕೊಂಡಿರುವ ಬ್ರಿಜ್ ಭೂಷಣ್ ದಾವೂದ್ ಇಬ್ರಾಹಿಂ ಜೊತೆಗೆ ಕಾಣಿಸಿಕೊಂಡವ ಎಂದು ಬಿಜೆಪಿಯವರು ಖಂಡಿಸಿದ್ದರು. ಈಗ ಆತ ಬಿಜೆಪಿ ಸಂಸದನಾದ ಕೂಡಲೆ ಆತ ಪವಿತ್ರ ನಾದನೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ರೀಟಾ ನೊರೋನ್ಹಾ, ಬಿ. ಎಂ. ರೋಹಿಣಿ, ಜ್ಯೋತಿ ಚೇಳ್ಯಾರ್, ಜಯಂತಿ ಶೆಟ್ಟಿ, ಸೀತಾರಾಮ ಭೇರಿಂಜ, ಕುಕ್ಯಾನ್, ಮುನೀರ್ ಕಾಟಿಪಳ್ಳ, ಬಜಾಲ್, ಮೊದಲಾದವರು ಉಪಸ್ಥಿತರಿದ್ದರು.