ಮಂಗಳೂರು:  ತುಳು ನಾಡಿನಲ್ಲಿ ಆಹಾರ ಸಂಸ್ಕೃತಿಯ ಪ್ರತೀಕ. ದಕ್ಷಿಣ ಕನ್ನಡದ ಪ್ರವಾಸೋದ್ಯಮ, ಆಹಾರ ಮತ್ತು ಸಂಸ್ಕೃತಿ ಒಂದಕ್ಕೊಂದು ಸಂಬಂಧಿಸಿದ್ದಾಗಿದೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ವಿಶೇಷ ಅಧಿಕಾರಿ ಡಾ. ಶೇಕರ್ ನಾಯ್ಕ್ ಹೇಳಿದರು. ಅವರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಬಿ.ಬಿ.ಎ ಮತ್ತು ಬಿ.ಎ ಪ್ರವಾಸೋದ್ಯಮ ವಿಭಾಗದ ವತಿಯಿಂದ ಸೋಮವಾರ ನಡೆದ ಆಹಾರ ಮೇಳ- "ಅಟಿಲ್ 2K23" ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 

ಖಂಡಿಗೆ ಬೀಡಿನ ಶ್ರೀಧರ್ಮ ಅರಸು ಉಲ್ಲಾಯ ಕ್ಷೇತ್ರದ ಗಡಿ ಪ್ರಧಾನರಾದ  ಆದಿತ್ಯ ಮುಕ್ಕಾಲ್ದಿ ಅವರು ಆಹಾರಮೇಳವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಡಾ.ಅನಸೂಯ ರೈ ವಹಿಸಿದ್ದರು. ಬಿ.ಬಿ.ಎ ವಿಭಾಗ ಮುಖ್ಯಸ್ಥ ಡಾ. ಯತೀಶ್ ಕುಮಾರ್ ಹಾಗು  ಬಿ.ಎ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥೆ  ಡಾ. ಮೀನಾಕ್ಷಿ ಎಂ.ಎಂ, ಉಪನ್ಯಾಸಕರಾದ ಶ್ರೀರಾಜ್ ಬಿಎಸ್, ಪರಿಣಿತಾ ಶೆಟ್ಟಿ, ರೊವೀನಾ ಸೋನ್ಸ್, ಸುಹಾನಾ ಖುಲ್ಸಂ ಮೊದಲಾದವರು ಉಪಸ್ಥಿತರಿದ್ದರು.

ಆಹಾರ ಮೇಳದಲ್ಲಿ ಸುಮಾರು 65 ಕ್ಕೂ ಅಧಿಕ ಬಗೆಯ ಆಹಾರ ಖಾದ್ಯಗಳನ್ನು ವಿದ್ಯಾರ್ಥಿಗಳು ಮಾರಾಟ ಮಾಡಿದರು. ಕರಾವಳಿಯ ಹೆಸರಾಂತ ಸಸ್ಯಾಹಾರ ಖಾದ್ಯಗಳೊಂದಿಗೆ ಕೋರಿರೊಟ್ಟಿ, ಸೇಮೆದಡ್ಯೆ ಚಿಕನ್ ಕರಿ, ಮರ್ವಾಯಿ ಸುಕ್ಕದಂತಹ ಮಾಂಸಹಾರಿ ಖಾದ್ಯಗಳು, ವಿಶೇಷ ಊಟ, ಚಾಟ್ಗಳು, ಬೇಕರಿ ಐಟಂಗಳು, ಜ್ಯೂಸ್, ಮಾವು, ಹಲಸು ಮೊದಲಾದ ಹಣ್ಣುಗಳು, ಸಿಹಿ ಖಾದ್ಯಗಳು, ಜ್ಯೂಸ್ಗಳು, ವಿವಿಧಡೆ ಡೆಸರ್ಟ್‌ಗಳು  ಹೀಗೆ ಆಹಾರ ವೈವಿಧ್ಯ ಗಮನ ಸೆಳೆಯಿತು. ಆಹಾರದೊಂದಿಗೆ ಕರಾವಳಿಯ ವೈಷಿಷ್ಟ್ಯವನ್ನು ಬಿಂಬಿಸುವ ಪೋಸ್ಟರ್ಗಳು, ವಿದ್ಯಾರ್ಥಿಗಳ ಸಂಗೀತ ಸಂಭ್ರಮಕ್ಕೆ ಮೆರುಗು ನೀಡಿತು.