ಉತ್ತರ ಪ್ರದೇಶದ 3,050 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮತದಾರು ಬಿಜೆಪಿಗೆ ಬಲವಾದ ಹೊಡೆತ ನೀಡಿದ್ದಾರೆ.

ಎಲ್ಲ ಕಡೆ ಬಿಜೆಪಿಯದೇ ಗೆಲುವು ಎಂದು ಬಡಾಯಿ ಕೊಚ್ಚಿಕೊಂಡ ಬಿಜೆಪಿಗೆ ವಿಧಾನ ಸಭಾ ಚುನಾವಣೆ ಏಳು ತಿಂಗಳು ಇರುವಾಗಲೇ ಎದ್ದು ಹೋಗು ಎನ್ನುವಂಥ ಫಲಿತಾಂಶ ಸಿಕ್ಕಿದೆ. ಬಿಜೆಪಿಯ ಧಾರ್ಮಿಕ ಕೊಳಕು ರಾಜಕೀಯದ ಕಾಶಿ, ಮಥುರಾ, ಅಯೋಧ್ಯೆಯಂಥ ಸ್ಥಳಗಳಲ್ಲಿಯೇ ಬಿಜೆಪಿ ಸೋತು ಉದುರಿದೆ.

ಮತದಾರರು 1,983 ಜನ ಪಕ್ಷೇತರರನ್ನು ಆರಿಸಿದ್ದಾರೆ. ಪಕ್ಷಗಳಲ್ಲಿ ಅಖಿಲೇಶ್ ಸಿಂಗ್ ಯಾದವ್‌ರ (ಮುಲಾಯಂ) ಸಮಾಜವಾದಿ ಪಕ್ಷವು 760 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಬಿಜೆಪಿ 750, ಬಿಎಸ್‌ಪಿ 381, ಕಾಂಗ್ರೆಸ್ 76 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ.