ಮಂಗಳೂರು: ಲಾಲ್ ಬಾಗ್ ನ ಸಾಯಿಬೀನ್ ಕಾಂಪ್ಲೇಕ್ಸ್ ನ ಆಮಂತ್ರಣ ಎಂಬ ಹೆಸರಿನ ಅಂಗಡಿಯಲ್ಲಿ ನಿಷೇಧಿತವಾಗಿರುವ ಇ-ಸಿಗರೇಟ್ ಗಳನ್ನು, ಯಾವುದೇ ರಹದಾರಿಯನ್ನು ಪಡೆಯದೇ ಅಕ್ರಮವಾಗಿ ಸ್ವದೇಶಿ ಮತ್ತು ವಿದೇಶಿಯ ಸಿಗರೇಟ್ ಗಳನ್ನು ಹಾಗೂ ಹುಕ್ಕಾ ಸೇವನೆ ಮಾಡಲು ಬಳಸುವ ಸಾಧನಗಳನ್ನು ಅಕ್ರಮವಾಗಿ ಇಟ್ಟುಕೊಂಡು ಸಾರ್ವಜನಿಕರಿಗೆ, ಯುವಕರ-ಯುವತಿಯರಿಗೆ ಸರಬರಾಜು ಹಾಗೂ ಮಾರಾಟ ಮಾಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದ ಮೇರೆಗೆ ಬರ್ಕೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮೋಹನ್ ಕೊಟ್ಟಾರಿರವರು ಠಾಣಾ ಪಿ.ಎಸ್.ಐ ಮತ್ತು ಸಿಬ್ಬಂದಿಗಳೊಂದಿಗೆ *ದಿನಾಂಕ: 06-10-2025 ರಂದು ಸಂಜೆ* ದಾಳಿ ನಡೆಸಿರುತ್ತಾರೆ.

ಸದ್ರಿ ಆಮಂತ್ರಣ ಎಂಬ ಹೆಸರಿನ ಶಾಪ್ ಗೆ ದಾಳಿ ಮಾಡಿದಾಗ ಸದ್ರಿ ಶಾಪ್ ನಲ್ಲಿ ಒಟ್ಟು 847 (ಅಂದಾಜು ಮೌಲ್ಯ 4,43,125/-) ವಿವಿಧ ಕಂಪನಿಗಳ ಇ-ಸಿಗರೇಟ್ ಗಳನ್ನು, ಸಿಗರೇಟ್ ನ ಪ್ಯಾಕ್ ನ ಮೇಲೆ 85% ಪ್ರತಿಶತ ಅದರ ಸೇವನೆಯಿಂದ ಆಗುವ ದುಷ್ಪರಿಣಾಮದ ಚಿತ್ರವನ್ನು ಪ್ರದರ್ಶಿಸದೇ ಇರುವ ವಿವಿಧ ಕಂಪನಿಗಳ ಸ್ವದೇಶಿ ಮತ್ತು ವಿದೇಶಿಯ ಒಟ್ಟು 10 Pack (412 Box) ಮತ್ತು 86 Pack ಸಿಗರೇಟ್ ಗಳು (ಅಂದಾಜು ಮೌಲ್ಯ 5,09120/-) ಮತ್ತು ಹುಕ್ಕಾ ಸೇವನೆ ಮಾಡುವ ಬಳಸುವ ವಿವಿಧ ಆಕೃತಿಗಳ 25 (ಅಂದಾಜು ಮೌಲ್ಯ ರೂ.20,500/-) ಸಾಧನಗಳನ್ನು ಒಟ್ಟು ಅಂದಾಜು ಮೌಲ್ಯ ರೂ.9,72,745/- ಬೆಲೆಭಾಳುವ ಸೊತ್ತುಗಳನ್ನು ಮಾರಾಟ ಹಾಗೂ ಸರಬರಾಜು ಮಾಡಲು ವಶದಲ್ಲಿ ಇಟ್ಟುಕೊಂಡಿರುವುದನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ಈ ಕುರಿತಂತೆ 1). ಸಂತೋಷ್ ಪ್ರಾಯ 32 ವರ್ಷ ವಾಸ: ಗಣೇಶ್ ಕೋಡಿ ಹೌಸ್, ಬಂಟ್ವಾಳ ತಾಲೂಕು ದ.ಕ ಜಿಲೆ ಮತ್ತು 2). ಇಬ್ರಾಹಿಂ ಇರ್ಷಾದ್ ಪ್ರಾಯ 33 ವರ್ಷ ವಾಸ: ಜಾಮೀಯಾ ಮಸೀದಿ ಬಳಿ, ಕುದ್ರೋಳಿ, ಮಂಗಳೂರು ಹಾಗೂ ಶಾಪ್ ನ ಮಾಲಕ 3). ಶಿವು ದೇಶಕೋಡಿ ಎಂಬುವರ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಮೊ.ನಂ: 104/2025 ಕಲಂ: 7 & 8 Prohibition of Electronic Cigarettes (Production, Manufacture, Import, Export, Transport, Sale, Distribution, Storage and Advertisement) Act 2019 ಮತ್ತು ಕಲಂ: 20(2) COTPA, Cigarettes and Other Tobacco Products Act (Amendment) Bill 2015 ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.