ಓಮನ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿದ ಭಾರತದ ಜೂನಿಯರ್ ಹಾಕಿ ತಂಡವು ನಾಲ್ಕನೆಯ ಬಾರಿ ವಿಶ್ವ ವಿಜೇತ ಆಯಿತು. ಉತ್ತಮ್ ಸಿಂಗ್ ನೇತೃತ್ವದ ತಂಡವು ಉತ್ತಮವಾಗಿ ಆಡಿ ದಾಖಲೆಯ ಬಾರಿ ಪ್ರಶಸ್ತಿ ಗೆದ್ದು ಕೊಂಡಿತು.

ಭಾರತೀಯ ಹಾಕಿ ಫೆಡರೇಶನ್ ವಿಜೇತ ತಂಡದ ಪ್ರತಿಯೊಬ್ಬರಿಗೂ ತಲಾ ರೂ. 2 ಲಕ್ಷ ಮತ್ತು ತಂಡ ಸಹಾಯಕರಿಗೆ ರೂ. 1 ಲಕ್ಷ ಕೊಡುಗೆ ಘೋಷಿಸಿದೆ.