ಭಾಲ್ಕಿ, ಬೀದರ್:  ಬಾಲ ಯೇಸುವಿನ ವಾರ್ಷಿಕ ಮಹೋತ್ಸವವು ಭಾಲ್ಕಿ ನಗರದ ಬಾಲ ಯೇಸು  ಪುಣ್ಯಕ್ಷೇತ್ರದಲ್ಲಿ ದಿನಾಂಕ 14 ರಂದು ಆಚರಿಸಲಾಯಿತು. ದೇವರ ವಾಕ್ಯವನ್ನು  ಫಾದರ್ ಕರುನೇಶ್ ತದನಂತರ ಆರಾಧನೆಯನ್ನು ಫಾದರ್ ಜಾರ್ಜ್ ರವರು ನಡೆಸಿಕೊಂಡು ಹೋದರು. ಪ್ರಧಾನ ಯಾಜಕ ರಾಗಿ ಫಾದರ್ ಸ್ಟ್ಯಾನಿ ಲೋಬೊ ಅವರು ಸಾಂಭ್ರಮಿಕ ದಿವ್ಯಬಲಿಪೂಜೆ ಯನ್ನು  ಬಲಿ ಪೂಜೆಯನ್ನು ಅರ್ಪಿಸಿದರು. 

ಬಲಿಪೂಜೆಯ ನಂತರ ಶಿಕ್ಷಣದಲ್ಲಿ ಸಾಧನೆಯನ್ನು ಮಾಡಿದವರಿಗೆ ಹಾಗೂ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಧರ್ಮಗುರು ಫಾದರ್ ಕ್ಲೇರಿ ಡಿಸೋಜರವರು  ಶಾಲು ಹಾಗೂ ನೆನಪಿನ ಕಾಣಿಕೆಯನ್ನು ಕೊಡುವ ಮುಖಾಂತರ ಸನ್ಮಾನಿಸಲಾಯಿತು. 

ಸರಕಾರದ ನಿಯಮದ ಪ್ರಕಾರ ಹಾಗೂ ಕೋರೋಣ  ರೋಗವನ್ನು ನಿಯಂತ್ರಿಸುವ ಸಲುವಾಗಿ ಭಕ್ತಜನರ ನಿರ್ಬಂಧಿಸಲಾಗಿತ್ತು. ಭಕ್ತಜನರು ಬಾಲ ಏಸುವಿಗೆ ಹೂವನ್ನು ನೀಡುವ ಮುಖಾಂತರ ಹಾಗೂ ಮೊಂಬತ್ತಿಗಳನ್ನು ಹಚ್ಚುವ ಮುಖಾಂತರ ಪ್ರಾರ್ಥನೆ ಸಲ್ಲಿಸಿದರು. 

ದೈವಾರಧನೆ ವಿಧಿಯನ್ನು ಗುಲ್ಬರ್ಗ ಧರ್ಮಕ್ಷೇತ್ರದ ಯುಟ್ಯೂಬ್ ಚಾನೆಲ್ ನಲ್ಲಿ ಹಾಗೂ ಡಿವೈನ್ ವರ್ಡ್  ಟಿವಿ  ಚಾನಲ್ನಲ್ಲಿ ನೇರ ಪ್ರಸಾರ ಮಾಡಲಾಯಿತು. ಇದರ  ಸಂಪೂರ್ಣ ಜವಾಬ್ದಾರಿಯನ್ನು ಫಾದರ್ ರೋಶನ್ ಡಿಸೋಜಾರವರು ವಹಿಸಿಕೊಂಡರು. ಭಕ್ತಜನರಿಗೆ ಭೋಜನವನ್ನು ನೀಡುವ ಮುಖಾಂತರ ಹಬ್ಬದ ಸವಿಯನ್ನು ನೀಡಿದರು.