ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.) ಮಡಂತ್ಯಾರು, ಇದರ ಆಡಳಿತ ಮಂಡಳಿಯ ಚುನಾವಣೆಯು ಇದೇ 2025 ಅಕ್ಟೋಬರ್ 28 ರಂದು ಅವಿರೋಧವಾಗಿ ನಡೆಯಿತು. ಸೊಸೈಟಿಯ 11 ಮಂದಿ ಸಮಾನ ಮನಸ್ಕರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಮುಂದಿನ 2025-2030ರ ಅವಧಿಗೆ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆಯು ಇದೇ 2025 ನವೆಂಬರ್ 04ರಂದು ಬೆಳ್ತಂಗಡಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ವಿ. ಪ್ರತಿಮಾ ಚುನಾವಣಾ ಅಧಿಕಾರಿಯವರ ನೇತೃತ್ವದಲ್ಲಿ ನಡೆಯಿತು.

ಸೊಸೈಟಿಯು ಕಳೆದ 10 ವರ್ಷದಿಂದ ಯಶಸ್ವಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದು ಈ ಎಲ್ಲಾ ಸಾಧನೆಯಲ್ಲಿ ಅಧ್ಯಕ್ಷರಾಗಿ ಸತತ ಎರಡು ಅವಧಿಯಲ್ಲಿ ನಿಸ್ವಾರ್ಥ ಸೇವೆಗೈದ ಲೆನ್ಸಿ ಪಿಂಟೊರವರು ಮಗದೊಮ್ಮೆ ಮೂರನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ಫ್ರಾನ್ಸಿಸ್ ವಿ.ವಿ. ನಿರ್ದೇಶಕರುಗಳಾಗಿ ವಿವೇಕ್ ವಿನ್ಸೆಂಟ್ ಪಾೈಸ್, ಜೋಯೆಲ್ ಗೋಡ್‍ಫ್ರಿ ಮೆಂಡೋನ್ಸಾ, ಸಿರಿಲ್ ಸಿಕ್ವೇರಾ, ರೊನಾಲ್ಡ್ ಸಿಕ್ವೇರಾ, ಗ್ರೆಗೋರಿ ಸೇರಾ, ಲಿಯೋ ರೊಡ್ರಿಗಸ್, ಸೆಲೆಸ್ತಿನ್ ಡಿ ಸೋಜಾ, ಗ್ರೇಸಿ ರೀಟಾ ರೆಬೆಲ್ಲೊ, ಮೋಲಿ ಫೆರ್ನಾಂಡಿಸ್ ಆಯ್ಕೆಯಾಗಿದ್ದು ಮುಂದಿನ 5 ವರ್ಷಗಳಿಗೆ ಈ ಮಂಡಳಿಯು ಸೊಸೈಟಿಯ ಜವಾಬ್ದಾರಿಯನ್ನು ಹೊತ್ತುಕೊಂಡು ಕಾರ್ಯನಿರ್ವಹಿಸಲಿದೆ.
ಈ ಪ್ರಕ್ರಿಯೆಯನ್ನು ದ.ಕ. ಜಿಲ್ಲಾ ಸಹಕಾರಿ ಸಂಘಗಳ ಉಪ ನಿರ್ದೇಶಕರಾದ ಎಚ್.ಎನ್. ರಮೇಶ್‍ರವರ ನಿರ್ದೇಶನದಂತೆ ಬೆಳ್ತಂಗಡಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ವಿ. ಪ್ರತಿಮಾರವರು ಚುನಾವಣಾ ಅಧಿಕಾರಿಯಾಗಿ ಎಲ್ಲಾ ಪ್ರಕ್ರಿಯೆಗಳನ್ನು ಸುಸೂತ್ರವಾಗಿ ನಡೆಸಿಕೊಟ್ಟರು. ಚುನಾವಣೆಯ ಎಲ್ಲಾ ಪ್ರಕ್ರಿಯೆಗಳನ್ನು ಸುಗಮವಾಗಿ ನಡೆಸಿದ ಇವರ ಕಾರ್ಯವೈಖರಿಯ ಬಗ್ಗೆ ಸಂಘದ ಅದ್ಯಕ್ಷರಾಗಿ ಆಯ್ಕೆಯಾದ ಲೆನ್ಸಿ ಪಿಂಟೊ ಮತ್ತು ನಿರ್ದೇಶಕ ಮಂಡಳಿಯು ಪ್ರಶಂಸೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಸೊಸೈಟಿಯ ಮುಖ್ಯ ಸಲಹೆಗಾರರಾದ ಮೋನಪ್ಪ ಪೂಜಾರಿ ಕಡೆಂತ್ಯ್ಯಾರು ಉಪಸ್ಥಿತರಿದ್ದು ಶುಭ ಹಾರೈಸಿದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ವಲೇರಿಯನ್ ಡಿ ಸೋಜಾರವರು ವಂದಿಸಿದರು.