ಮಂಗಳೂರು : ಯಕ್ಷಗಾನ ತುಳುನಾಡಿನ ಗಂಡು ಕಲೆ ಮಕ್ಕಳ ಭವಿಷ್ಯ ಉಜ್ವಲವಾಗುವುದು ಯಕ್ಷಗಾನದಂತಹ ರಂಗ ಕಲೆಗಳ ಮುಖೇನ ಸಾಧ್ಯ ಎಂದರು ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ನಡೆಸುವ 12 ದಿನಗಳ ತುಳು ಯಕ್ಷ ಜಾತ್ರೆಯ 6ನೇ ದಿನದ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನ್ನಾಡಿದರು ಮುಖ್ಯ ಅತಿಥಿಯಾಗಿ ಆಗಮಿಸಿದ ವಸಂತ ಶೆಟ್ಟಿ ಇವರು ಮಾತನ್ನಾಡಿ ತುಳು ಅಕಾಡೆಮಿ ಕಲಾವಿದರ ಸಮಾಗಮ ಕೇಂದ್ರವಾಗುವಂತೆ ರಂಗಕಲೆಗಳಿಗೆ ಅವಕಾಶವನ್ನೊದಗಿಸಿದ ಅಕಾಡಮಿಯನ್ನು ಅಭಿನಂದಿಸಿದರು. ಅತಿಥಿಗಳಾಗಿ ಶಶಿಧರ್ ಕಾರಂತ್ , ಅನಿಲ್ ಪಂಡಿತ್ ಬಾಲಚಂದ್ರ ಶರ್ಮ ನವೀನ್ ರಾಜ್ ಉಪಸ್ಥಿತರಿದ್ದರು ಯಕ್ಷಗಾನ ಕಲಾವಿದರಾದ  ತಿಲಕ್ ಹೆಗ್ಡೆ ಪುತ್ತೂರು ಬೋಳಂತೂರು ಜಗದೀಶ್ ಇವರನ್ನು ಸನ್ಮಾನಿಸಲಾಯಿತು ಅಕಾಡೆಮಿ ಸದಸ್ಯರಾದ ನರೇಂದ್ರ ಕೆರೆಕಾಡು ಸ್ವಾಗತಿಸಿದರು ಕಡಬ ದಿನೇಶ್ ರೈ ನಿರೂಪಿಸಿದರು. ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರ ಮಂಗಳಾದೇವಿ ರವರಿಂದ ಓಂ ನಮಃ ಶಿವಾಯ ಯಕ್ಷಗಾನ ನಡೆಯಿತು.