ತಾಯಿ ಸತ್ತು ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಶವದ ಪಕ್ಕದಲ್ಲಿ ರಕ್ತದ ಕೈಯಿಂದಲೇ ಒಬ್ಬಳು ಇನ್ನೊಬ್ಬಳಿಗೆ ಬಿಸ್ಕತ್ತು ತಿನ್ನಿಸುತ್ತ ಕುಳಿತಿದ್ದ ಘೋರ ಸಂಗತಿಯೊಂದು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಿಂದ ವರದಿಯಾಗಿದೆ.

ಉಷಾಳ ಗಂಡ ಓಡಿಹೋಗಿದ್ದ. ಆಕೆ ದುಡಿದು ಇಬ್ಬರು ಮಾನಸಿಕ ಅಸ್ವಸ್ಥ ಮಗಳಂದಿರನ್ನು ಸಾಕಿದಳು. ಇಂದು ಬಾಗಿಲು ತೆರೆಯದ್ದು ನೋಡಿ ನೆರೆಮನೆಯವರು ಇಣುಕಿ ನೋಡಿದರೆ ಘೋರ ಕಂಡಿತು.

ಕೂಡಲೆ ನೆಲ್ಲಿ ಪೋಲೀಸು ಠಾಣೆಗೆ ಮಾಹಿತಿ ನೀಡಲಾಗಿದೆ. ಎಷ್ಟೋ ಪುಸಲಾಯಿಸಿ ಬರ್ಗರ್ ಕೊಡಿಸುವುದಾಗಿ ಹೇಳಿದ ಮೇಲೆ ಬಾಗಿಲು ತೆರೆದಿದ್ದಾರೆ. ಒಬ್ಬಾಕೆ ಉಹೂಂ, ಎಂದರೆ ಇನ್ನೊಬ್ಬಾಕೆ ನಾವು ಕಟ್ಟಿಗೆಯಿಂದ ಬಡಿದು ಕೊಂದುದಾಗಿ ಹೇಳಿದ್ದಾಳೆ. ಇಬ್ಬರನ್ನೂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಯಿತು. ‌ತನಿಖೆ ನಡೆದಿದೆ.