ಜರ್ಮನಿಯ ಮರ್ಸಿಡಿಸ್ ಬೆಂಜ್ ಕಾರು ಕಂಪೆನಿಯು 2.17 ಕೋಟಿ ರೂಪಾಯಿ ಬೆಲೆಯ ಎಸ್ ಕ್ಲಾಸ್ ಸೆಡಾನ್ ಕಾರುಗಳನ್ನು ಭಾರತದಲ್ಲಿ ಶುಕ್ರವಾರ ಬಿಡುಗಡೆ ಮಾಡಿತು.

2021ರಲ್ಲಿ‌ 15 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವುದಾಗಿ ಹೇಳಿದ್ದ ಕಂಪೆನಿಯು ಈಗಾಗಲೆ ಅದರಲ್ಲಿ 8ನ್ನು ತಂದಿದೆ.

ಭಾರತದಲ್ಲಿ ಈ ಹೊಸ ಕಾರು ಮೊದಲಿಗೆ 150 ಮಾತ್ರ ಮಾರಟಕ್ಕಿದ್ದು ಅದರಲ್ಲಿ ಅರ್ಧಕ್ಕರ್ಧ ಈಗಾಗಲೇ ಬುಕ್ ಆಗಿದೆ ಎಂದೂ ಕಂಪೆನಿ ಹೇಳಿದೆ.

ಎಸ್ 400 ಡಿ4 ಮ್ಯಾಟಿಕ್ ಡೀಸೆಲ್‌‌ಗೆ, ಎಸ್ 450 ಮ್ಯಾಟಿಕ್ ಪೆಟ್ರೋಲಿಗೆ ಎಂದು ಈ ಕಾರು ರಸ್ತೆಗೆ ನುಗ್ಗಲಿದೆ.