ತಮಿಳುನಾಡಿನ 235 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಸೂರ್ಯ ಚಿಹ್ನೆಯ ಡಿಎಂಕೆ ಪಕ್ಷವು ಮೂರನೇ ಎರಡು ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ.

ಡಿಎಂಕೆ ಕೂಟ 160 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದರೆ, ಆಳುವ ಎಡಿಎಂಕೆ ಕೂಟವು 75 ಸ್ಥಾನಗಳನ್ನು ಮಾತ್ರ ಗೆದ್ದು ಅಧಿಕಾರ ಕಳೆದುಕೊಂಡಿತು. ನಟ ಕಮಲ ಹಾಸನ್ ಮೊದಲಾದವರ ಪಕ್ಷಗಳು ಹೇಳ ಹೆಸರಿಲ್ಲದಾದವು.

50 ವರುಷ ಶಾಸಕರಾಗಿದ್ದ ಹಾಗೂ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ, ಸಾಹಿತಿ, ಪತ್ರಕರ್ತ, ಕಲಾವಿದರೂ ಆಗಿದ್ದ ಮುತ್ತುವೇಲು ಕರುಣಾನಿಧಿ ಅವರ ಮಗ ಸ್ಟಾಲಿನ್ ನಾಯಕತ್ವದಲ್ಲಿ ಡಿಎಂಕೆ ಗೆದ್ದಿದೆ. ಆಂಧ್ರ ಸಹಿತ ಹಲವು ರಾಜ್ಯಗಳ ಬಳಿಕ ತಮಿಳುನಾಡಿನಲ್ಲಿ ತಂದೆಯ ಬಳಿಕ ಮಗನೂ ಮುಖ್ಯಮಂತ್ರಿ ಆದಂತಾಯಿತು.