ಈಶಾನ್ಯ ದೆಹಲಿ ಹಿಂಸಾಚಾರದಲ್ಲಿ ಭಾಗಿಯಾಗಿದ್ದರು ಎಂಬ ಆರೋಪ‌ ಎದುರಿಸುತ್ತಿರುವ ಮೂವರು ವಿದ್ಯಾರ್ಥಿಗಳಿಗೆ ಭಯೋತ್ಪಾದನೆ ನಿಗ್ರಹ ಕಾನೂನು ಬಗೆಗೆ ಅಭಿಪ್ರಾಯ ತಿಳಿಸುವಂತೆ ಸುಪ್ರೀಂ ಕೋರ್ಟ್ ಇಂದು ನೋಟೀಸು ನೀಡಿತು.

ಈ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಅದರ ವಿರುದ್ಧ ದೆಹಲಿ ‌ಪೋಲೀಸರು ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲದೆ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ್ದನ್ನು ಉದಾಹರಣೆ ನೀಡಿದ್ದರು.

ನ್ಯಾಯಾಧೀಶರುಗಳಾದ ಹೇಮಂತ್ ಗುಪ್ತ, ವಿ.‌ ರಮಾ ಸುಬ್ರಮಣಿಯನ್ ಇದ್ದ ನ್ಯಾಯ ಪೀಠವು ಹೈಕೋರ್ಟ್ ತೀರ್ಪನ್ನು ಗಮನಿಸಲೇ ಬೇಕೆಂದೇನೂ ಇಲ್ಲ. ವಿದ್ಯಾರ್ಥಿಗಳಿಗೆ ನೀಡಿರುವ ಜಾಮೀನು ಮುಂದಿನ ಮಾಹಿತಿ ವರೆಗೆ ರದ್ದಾಗದು. ಭಯೋತ್ಪಾದನೆ ನಿಗ್ರಹ ಕಾನೂನು ದೇಶದಲ್ಲೆಲ್ಲ ಸುದ್ದಿ ಮಾಡುತ್ತಿದೆ. ಅದರ ಪರಿಣಾಮ, ದುಷ್ಪರಿಣಾಮಗಳ ಅಧ್ಯಯನ ಸಹ ಆಗಬೇಕಾಗಿದೆ ಎಂದ ಪೀಠವು, ಆರೋಪಿಗಳಿಗೆ ಆ ಕಾಯ್ದೆಯ ಬಗೆಗೆ ಅಭಿಪ್ರಾಯ ತಿಳಿಸಲು ಹೇಳಿತು. ಪೋಲೀಸರು ಅದಕ್ಕೆ ಕೆಲ ದಿನ ಕಾಯಬೇಕು ಎಂಬುದು ತಿಳಿದು ಬಂದ ಒಟ್ಟಭಿಪ್ರಾಯ.