ಮುಂಬಯಿ: ವಿಶ್ವವಿದ್ಯಾಲಯದ ಕುಸುಮಾಗ್ರಜ ಸಭಾಂಗಣದಲ್ಲಿ ಕುಸುಮೋದರ ಶೆಟ್ಟಿಯವರಿಗೆ ಗೌರವ ಗ್ರಂಥ ಅರ್ಪಣೆಯ ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಎಲ್ಲರ ಬಗ್ಗೆ ಗ್ರಂಥ ರಚನೆ ಆಗುವುದಿಲ್ಲ. ಸಮಾಜದಲ್ಲಿನ ಅರ್ಹ ವ್ಯಕ್ತಿಗಳಿಗೆ ಮಾತ್ರ ಇಂತಹ ಗ್ರಂಥ ರಚನೆಯಾಗಿ ಅರ್ಪಣೆಯಾಗುತ್ತದೆ. 

ಬಡತನದಿಂದ ಮೇಲೆದ್ದು ಕಠಿಣ ಪರಿಶ್ರಮದಿಂದ ತಮ್ಮ ಉದ್ಯಮದಲ್ಲಿ ಸಾಧನೆಯೊಂದಿಗೆ ಸಮಾಜಮುಖಿಯಾಗಿ ಬದುಕು ಕಟ್ಟಿಕೊಂಡಿರುವ ಶ್ರೇಷ್ಠ ವ್ಯಕ್ತಿತ್ವದ  ಕುಸುಮೋದರ ಶೆಟ್ಟಿ ಅವರಿಗೆ ಗೌರವ ಗ್ರಂಥ ಅರ್ಪಣೆಯಾಗಿರುವುದು ತುಂಬಾ ಸಂತೋಷವಾಗಿದೆ. ಕುಸುಮೋದರ ಶೆಟ್ಟಿಯವರ ತಾಯಿ ಭವಾನಿ ಶೆಟ್ಟಿ ಅವರು ತಮ್ಮ ಸಂಸಾರಕ್ಕೆ ಒಳ್ಳೆಯ ಸಂಸ್ಕೃತಿ- ಸಂಸ್ಕಾರವನ್ನು ನೀಡಿದ್ದಾರೆ. ಅದನ್ನು ಕುಸುಮೋದರ ಶೆಟ್ಟಿಯವರು ತನ್ನ ಜೀವನದಲ್ಲಿ ಮೈಗೂಡಿಸಿಕೊಂಡು ಬೆಳೆದಿದ್ದರಿಂದ ಅವರು  ಈ ಗೌರವ ಗ್ರಂಥ ಸ್ವೀಕರಿಸುವ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಮಹಾರಾಷ್ಟ್ರದ ನೆಲದಲ್ಲಿ ತನ್ನ ತಾಯಿಯ ಹೆಸರಿನಲ್ಲಿ ಫೌಂಡೇಶನ್ ಸ್ಥಾಪಿಸಿ ಆ ಮೂಲಕ ಬಡವರ ಕಣ್ಣೀರು ಒರೆಸುವ ಕಾಯಕವನ್ನು ಕುಸುಮೋದರ ಶೆಟ್ಟಿ ಹಾಗೂ ಅವರ ಪರಿವಾರದವರು ಮಾಡುತ್ತಾ ಬಂದಿರುವುದು ಅಭಿನಂದನೀಯ. ದೇವರು ಕುಸುಮೋದರ ಶೆಟ್ಟಿ ಅವರಿಗೆ ದುಡ್ಡು ಸಂಪತ್ತಿನ ಜೊತೆಗೆ ಮಾನವೀಯ ಗುಣವನ್ನು ಅನುಗ್ರಹಿಸಿದ್ದಾರೆ. ಆದ್ದರಿಂದ ಅವರು ಧರ್ಮ ಕಾರ್ಯ- ಸತ್ಕಾರ್ಯಗಳಿಗೆ  ತಮ್ಮ ಸಂಪತ್ತಿನ ಆಲ್ಫಾಂಶವನ್ನು  ವಿನಿಯೋಗಿಸುತ್ತಾ ಬಂದಿದ್ದಾರೆ. ಬಡವರ ಕಣ್ಣೀರು ಒರೆಸಿ‌ ಎಲ್ಲರೊಂದಿಗೆ ಬೆರೆತು  ಪ್ರೀತಿಯನ್ನು ಹಂಚಿ ಬಾಳುವ ಕುಸುಮೋದರ ಶೆಟ್ಟಿ ಅವರದ್ದು ಆದರ್ಶ ವ್ಯಕ್ತಿತ್ವ. ಶ್ರೇಷ್ಠ ಸಾಧಕ ಹಾಗೂ ಸಮಾಜ ಸೇವಕ ಕುಸುಮೋದರ ಶೆಟ್ಟಿ ಅವರ ಜೀವನ ಚರಿತ್ರೆಯನ್ನು ಗ್ರಂಥದಲ್ಲಿ ಉತ್ತಮವಾಗಿ ದಾಖಲಿಸಿದ ಡಾ. ದಿನೇಶ್ ಶೆಟ್ಟಿ ಕೂಡಾ ಅಭಿನಂದನೀಯರು ಎಂದು ತುಳು ಸಂಘ ಬರೋಡಾ ಗೌರವಾಧ್ಯಕ್ಷ ಶಶಿಧರ್ ಶೆಟ್ಟಿ ಬರೋಡಾ ನುಡಿದರು.

ಅವರು  ವಿದ್ಯಾನಗರಿ ಕಲೀನಾ ಮುಂಬಯಿ ವಿಶ್ವವಿದ್ಯಾಲಯದ ಕವಿ ಕುಸುಮಾಗ್ರಜ ಸಭಾಂಗಣ, ಮರಾಠಿ ಭಾಷಾ ಭವನ ಮುಂಬಯಿ ವಿಶ್ವವಿದ್ಯಾಲಯ ಪ್ರಕಟಿತ ಡಾ. ಅಶೋಕ್ ಆಳ್ವ ಹಾಗೂ ಡಾ. ದಿನೇಶ್ ಶೆಟ್ಟಿ ರೆಂಜಾಳ ಪ್ರಧಾನ ಸಂಪಾದಕತ್ವದಲ್ಲಿ ರಚನೆಗೊಂಡ 'ಕುಸುಮೋದರ' ಗೌರವ ಗ್ರಂಥವನ್ನು ಬಿಡುಗಡೆಗೊಳಿಸಿದ ಬಳಿಕ ಅದನ್ನು ಕುಸುಮೋದರ ಶೆಟ್ಟಿಯವರಿಗೆ ಆರ್ಪಿಸಿ ಮಾತನಾಡಿದರು.

ಬಂಟರ ಸಂಘದ ಬಂಟರ ವಾಣಿ ಮಾಸಪತ್ರಿಕೆಯ ಗೌರವ ಸಂಪಾದಕರಾದ ಅಶೋಕ್ ಪಕ್ಕಳ ಗ್ರಂಥವನ್ನು ಪರಿಚಯಿಸಿದರು.

ಈ ಸಂದರ್ಭದಲ್ಲಿ ಕುಸುಮೋದರ ಶೆಟ್ಟಿ ಹಾಗೂ ಸರಿತಾ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕುಸುಮೋದರ ಶೆಟ್ಟಿ ದಂಪತಿಯ ಪುತ್ರ ಜೀಕ್ಷಿತ್ ಕೆ.  ಶೆಟ್ಟಿ, ಪುತ್ರಿ ಶಿಖಾ ಎ.ಶೆಟ್ಟಿ, ಅಳಿಯ ಅಭಿಷೇಕ್ ಆನಂದ್ ಶೆಟ್ಟಿ, ಸೊಸೆ ಪ್ರಿಯಾಂಕಾ ಜಿ. ಶೆಟ್ಟಿ,ಮೊಮ್ಮಗ ಖೈಯಾಂಶ್ ಜಿ.ಶೆಟ್ಟಿ ಉಪಸ್ಥಿತರಿದ್ದರು.

ಮುಂಬಯಿ, ಶಬರಿ ಇಂಡಸ್ಟ್ರಿಯಲ್ ಕ್ಯಾಟರಿಂಗ್ ಸರ್ವಿಸಸ್ ಇದರ ಮುಖ್ಯ ನಿರ್ದೇಶಕ ಕೆ. ಕೆ. ಶೆಟ್ಟಿ ಅಹ್ಮದ್ ನಗರ್ , ಶಾಂತರಾಮ್ ಬಿ. ಶೆಟ್ಟಿ, ಕುಸುಮೋದರ ಶೆಟ್ಟಿಯವರ ಗ್ರಂಥ ಮುಂದಿನ ಪೀಳಿಗೆಗೆ ದಾರಿದೀಪ ಎಂದು ಚಂದ್ರಶೇಖರ್ ಪಾಲೆತ್ತಾಡಿ ತಿಳಿಸಿದರು.

ಪತ್ರಕರ್ತ, ಕುಸುಮೋದರ ಗ್ರಂಥದ ಪ್ರದಾನ ಸಂಪಾದಕ ಡಾ. ದಿನೇಶ್ ಶೆಟ್ಟಿ ರೆಂಜಾಳ ಮಾತನಾಡಿ ಕುಸುಮೋದರ ಶೆಟ್ಟಿಯವರ ಸಿದ್ದಿ ಸಾಧನೆಗಳ ಬಗ್ಗೆ  ಗ್ರಂಥವೊಂದು ಬರಬೇಕು ಎಂದು ಹೇಳಿ ಆ ಜವಾಬ್ದಾರಿಯನ್ನು ನನಗೆ ನೀಡಿದ ಗುರುಗಳಾದ ಡಾ. ಜಿ. ಎನ್ ಉಪಾಧ್ಯ ಅವರು ನನ್ನ ಮೇಲಿಟ್ಟ ನಂಬಿಕೆಯನ್ನು ಪ್ರಾಮಾಣಿಕವಾಗಿ,  ಶ್ರದ್ದಾಪೂರ್ವಕವಾಗಿ ನಿಭಾಸಿದ್ದೇನೆ ಎಂದರು.

ಮಂಗಳೂರು ಯಮುನ ಬಿಲ್ಡರ್ಸ್ ಪುರುಷೋತ್ತಮ್ ಶೆಟ್ಟಿ, ನ್ಯಾಯವಾದಿ ಚಿದಾನಂದ, ಡೊಂಬಿವಲಿ ದ್ವಾರಕಾ ಹೋಟೆಲ್ ವಿಜಿತ್ ಶೆಟ್ಟಿ ಸಂಚಾಲಕರು ವೇಣುಗೋಪಾಲ್ ರೈ, ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ, ವಿಶ್ವ ಹಿಂದೂ ಪರಿಷತ್ ನವಿಮುಂಬಯಿ ಅಧ್ಯಕ್ಷ ಸಂಜೀವ ಎನ್ ಶೆಟ್ಟಿ, ಭವಾನಿ ಪೌಂಡೇಶನ್ ಟ್ರಸ್ಟಿ, ವಾಸ್ತು ಮಾರ್ತಾಂಡ ನವೀನ್ ಚಂದ್ರ ಸನಿಲ್, ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ನಿತ್ಯಾನಂದ ಡಿ ಕೋಟ್ಯಾನ್, ಡೊಂಬಿವಲಿ ಗೋಪಾಲ್ ಶೆಟ್ಟಿ, ಹೋಟೆಲ್ ಉದ್ಯಮಿ ರವೀಶ್ ಶೆಟ್ಟಿ, ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಉದಯ್ ಶೆಟ್ಟಿ ಪೇಜಾವರ, ಬೊಂಬೆ ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ನಾರಾಯಣ ಶೆಟ್ಟಿ, ಇನ್ನ ಬೀಡು ರವೀಂದ್ರ ಶೆಟ್ಟಿ, ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಬಾಲಕೃಷ್ಣ ಶೆಟ್ಟಿ ಅಜೆಕಾರು, ಪತ್ರಕರ್ತರು ರವೀಂದ್ರ ಶೆಟ್ಟಿ, ಪ್ರಶಾಂತ್ ಅಮೀನ್, ಅಂಬರ್ ನಾಥ್ ನಿಜಲಿಂಗಪ್ಪ ಶಾಲೆಯ ತಿಲಕ್ ಚೆಲುವಾದಿ, ಮುಖ್ಯೋಪಾಧ್ಯಾಯನಿ ಅನಿತಾ ರಾಜವಳಿ, ಹಾಗೂ ಎಲ್ಲಾ ವಿದ್ಯಾರ್ಥಿ ಗಳನ್ನು, ಚೆಲ್ಲಡ್ಕ ಮನೆತನದ ಸಂಕಪ್ಪ ಶೆಟ್ಟಿ, ಕಾರ್ಕಳ ಮಹೇಂದ್ರ ಕಾಲೇಜಿನ ವಿದ್ಯಾರ್ಥಿಗಳಾದ ತೇಜಸ್ವಿ ಶೆಟ್ಟಿ ಮತ್ತು ಕುಸುಮೋದರ ಶೆಟ್ಟಿ ಅವರ ರೇಖಾ ಚಿತ್ರವನ್ನು ಬಿಡಿಸಿರುವ ಆದಿತ್ಯ ಸಾಲಿಯಾನ್  ಮೊದಲಾದ ಅನೇಕ ಗಣ್ಯರನ್ನು ಗೌರವಿಸಲಾಯಿತು.  

ಕುಸುಮೋದರ ಶೆಟ್ಟಿಯವರು ಸಮಾಜಕ್ಕೆ ದೊಡ್ಡ ಶಕ್ತಿ ಎಂದು ಮುಂಬೈ ಬಂಟರ ಸಂಘದ ಅಧ್ಯಕ್ಷ  ಪ್ರವೀಣ್ ಭೋಜ ಶೆಟ್ಟಿ ತಿಳಿಸಿದರು. ನಾವು ಜೀವನದಲ್ಲಿ ಎಷ್ಟೇ ಶ್ರೀಮಂತಿಕೆಯನ್ನು ಹೊಂದಿದರೂ ನಮ್ಮ ಆ ಹಿಂದಿನ ಕಷ್ಟದ ದಿನಗಳನ್ನು ಹಾಗೂ ನಮಗೆ ನೆರವಾದವರನ್ನು ಯಾವತ್ತೂ  ಮರೆಯಬಾರದು. ನನ್ನ ಜೀವನದ ಆರಂಭದಲ್ಲಿ ಎದುರಾದ ಕಷ್ಟ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಅದನ್ನೆಲ್ಲ ನಾನು ಛಲದಿಂದ ಎದುರಿಸಿ, ಸತ್ಯ ಧರ್ಮದ ಹಾದಿಯಲ್ಲಿ ನಡೆದು ಕರ್ತವ್ಯ ನಿಷ್ಠೆಯಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದರು.

ಕರ್ನೂರ್ ಮೋಹನ್ ರೈ ಕಾರ್ಯಕ್ರಮ‌ ನಿರೂಪಿಸಿದರು.