ವರದಿ ರಾಯಿ ರಾಜ ಕುಮಾರ

ಮೂಡುಬಿದಿರೆ ಮಹಾವೀರ ಕಾಲೇಜಿನ 60ನೇ ವರ್ಷಾಚರಣೆಯ  ಶುಭಾವಸರದಲ್ಲಿ ನವೆಂಬರ್ 5 ರಂದು ಮಹಾವೀರ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು. ಪಿಯು ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳ ಉದ್ಘಾಟನೆಯನ್ನು ಕಾರ್ಕಳ ಜೆಸಿ ಅಧ್ಯಕ್ಷೆ ಶ್ವೇತಾ ಜೈನ್ ಅವರು ನೆರವೇರಿಸಿ ವಿದ್ಯಾರ್ಥಿಗಳ ಆಂತರಿಕ ಪ್ರೌಢತೆಯನ್ನು ಒರೆಗೆ ಹಚ್ಚುವ ಇಂತಹ ಸ್ಪರ್ಧೆಗಳು ಹೆಚ್ಚು ಹೆಚ್ಚು ಶೈಕ್ಷಣಿಕ ಬಲವನ್ನು ನೀಡುತ್ತದೆ ಎಂದು ಶುಭ ಹಾರೈಸಿದರು.

ಶ್ರೀನಿತ್ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಪ್ರಾಂಶುಪಾಲ ಡಾ. ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಿಯು ಪ್ರಾಂಶುಪಾಲೆ ವಿಜಯಲಕ್ಷ್ಮಿ, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಪ್ರೊ. ಹರೀಶ್, ಡಾ. ಹರೀಶ್ ಎಚ್, ಹಾಜರಿದ್ದರು. 

ವಿದ್ಯಾರ್ಥಿ ಪ್ರತಿನಿಧಿಗಳಾದ ಪವನ್ ಕುಮಾರ್ ಸ್ವಾಗತಿಸಿದರು, ರಕ್ಷಿತಾ ಶೆಟ್ಟಿ, ಕಾರ್ಯಕ್ರಮ ನಿರ್ವಹಿಸಿದರು. ಲಾವಣ್ಯ ಮತ್ತು ವರ್ಷಿತ ಅಧಿತಿಗಳ ಪರಿಚಯವನ್ನು ಮಾಡಿದರು. ವಿಜೇಶ್ ವಂದಿಸಿದರು.