ಮೂಡುಬಿದಿರೆ:- ಇದೆ ಬರುವ ಅಕ್ಟೋಬರ್ 19 ರಂದು ಮೂಡುಬಿದಿರೆ ಜೈನ ಕಾಶಿಯಿಂದ  ಶ್ರೀಗಳಮಾರ್ಗದರ್ಶನದಲ್ಲಿ  ಜೂನ್ 8, 2014 ರಂದು ನಿರ್ಮಾಣವಾದ  15.5 ಅಡಿ ಎತ್ತರದ  ಭಗವಾನ್ ಬಾಹುಬಲಿ ಸ್ವಾಮಿಯ ಮೂರ್ತಿ ಬಜಗೋಳಿಯ ಐತಿಹಾಸಿಕ ಜೈನ ಪರಂಪರೆಯ ಮುಡಾರು ಗ್ರಾಮ ಬಜಗೋಳಿ ಸುಮ್ಮ ಗುತ್ತು ಬಂಡಸಾಲೆಯ  ಧರ್ಮ ಶಾಲೆಯಲ್ಲಿ ಮೂರ್ತಿ  ದಾನಿಗಳ ಅಪೇಕ್ಷೆಯಂತೆ ಸ್ಥಾಪನೆಗೊಳ್ಳಲಿದ್ದು ಅಕ್ಟೋಬರ್ 19 ರಂದು ಪ್ರತಿಮೆಯ ವಿಹಾರ ಮಧ್ಯಾಹ್ನ 1.30 ಕ್ಕೆ  ಮೂಡುಬಿದಿರೆ ಶ್ರೀ ಜೈನ ಮಠದ ಪರಿಸರದಿಂದ ಜಗದ್ಗುರು ಡಾ  ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿಗಳವರ ಉಪಸ್ಥಿತಿ  ಶುಭಾಶೀರ್ವಾದಗಳೊಂದಿಗೆ  ವಿಹಾರಗೊಳ್ಳಲಿದೆ.

ಸಂಜೆ 4.00 ಗಂಟೆ ಗೆ ಬಜಗೋಳಿ ಅಪ್ಪಾ ಯಿ ಬಸದಿ ಯಲ್ಲಿ ಅಭಿಷೇಕ ಪೂಜೆ ನೆರವೇರಿಸಿ ಸಂಜೆ  5.00  ಕ್ಕೆ ಬಜಗೋಳಿ  ಸುಮ್ಮ ಗುತ್ತು ಬಂಡಸಾಲೆ, ಧರ್ಮ ಶಾಲೆಗೆ ಪುರ ಪ್ರವೇಶವಾಗಲಿದೆ. ಅಂದು ಸಂಜೆ 6.30 ರಿಂದ ಧರ್ಮ ಶಾಲೆ ಟ್ರಸ್ಟ್ ವತಿಯಿಂದ  ಭರತ -ಬಾಹುಬಲಿ ಯಕ್ಷಗಾನ ತಾಳ ಮದ್ದಳೆ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಸೀಮಿತ ಆಹ್ವಾನಿತ ರ ಉಪಸ್ಥಿತಿಯಲ್ಲಿ ಜರುಗಲಿರುವುದು.

ಸ್ಪಿರಿಚುವಲ್ ಡಿವೊಶನ್ (Spiritual Devotion ) ಹಾಗೂ ಕರ್ನಾಟಕದಲ್ಲಿ  ಜೈನ ಧರ್ಮ,ಪೇಜ್ ನಲ್ಲಿ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿದ್ದು ಮನೆಯಲ್ಲೆ ಕುಳಿತು ಕಾರ್ಯಕ್ರಮ ವೀಕ್ಷಿಸಬಹುದಾಗಿದೆ ಎ೦ದು ಶ್ರೀ ಜೈನ ಮಠ ಮೂಡುಬಿದಿರೆಯ ವ್ಯವಸ್ಥಾಪಕರು, ಸಂಜಯಂತ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.