ಉಡುಪಿ: ಜಿಲ್ಲಾ ಪೊಲೀಸ್ ಇಲಾಖೆಯಲ್ಲಿನ,  2016-17, 2017-18 ಮತ್ತು 2018-19 ನೇ ಸಾಲಿನ ವಿವಿಧ ರೀತಿಯ ವಾಹನದ ಟಯರ್ ಟ್ಯೂಬ್ ಮತ್ತು ಕಬ್ಬಿಣ ಹಿತ್ತಾಳೆ ಮತ್ತು ಪ್ಲಾಸ್ಟಿಕ್ ಬಿಡಿಭಾಗಗಳನ್ನು ಅಕ್ಟೋಬರ್ 30 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಪೊಲೀಸ್ ಮೋಟಾರ್ ವಾಹನ ವಿಭಾಗ, ಉಡುಪಿಯ ಆವರಣದಲ್ಲಿ ಟೆಂಡರ್ ಕಂ ಬಹಿರಂಗ ಹರಾಜು ಮಾಡಲಾಗುವುದು.ಆಸಕ್ತ ಬಿಡ್‍ದಾರರು ಸದ್ರಿ ಹರಾಜಿನಲ್ಲಿ ಭಾಗವಹಿಸುವುದರ ಮೂಲಕ ಅಥವಾ ಟೆಂಡರ್‍ಗಳನ್ನು ಸಲ್ಲಿಸುವುದರ ಮೂಲಕ ಈ ವಾಹನ ಮತ್ತು ನಿರುಪಯುಕ್ತ ವಸ್ತುಗಳನ್ನು ಪಡೆಯಬಹುದಾಗಿದೆ ಎಂದು ಉಡುಪಿ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.