ಉಡುಪಿ (ಜುಲೈ 15):   ಜಿಲ್ಲೆಯಲ್ಲಿ ಕೋವಿಡ್-19 (ಕೋರೋನ ವೈರಾಣು ಕಾಯಿಲೆ 2019)ರ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಕಂಟೈನ್ ಮೆಂಟ್ ವಲಯಗಳಲ್ಲಿ ಕೆಲವೊಂದು ನಿರ್ಬಂಧಗಳನ್ನು ಹೇರುವುದು ಮತ್ತು ಕಂಟೈನ್ ಮೆಂಟ್ ಹೊರವಲಯಗಳಲ್ಲಿ ಕೆಲವೊಂದು ಚಟುವಟಿಕೆಗಳ ನಿರ್ಬಂಧಗಳನ್ನು ಸಡಿಲಗೊಳಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಅತಿ ಅವಶ್ಯಕವಾಗಿದ್ದು,  ಇದಕ್ಕಾಗಿ ಜಿಲ್ಲೆಯಾದ್ಯಂತ ಜುಲೈ 15 ರಿಂದ ಅನ್ವಯವಾಗುವಂತೆ ಮುಂದಿನ ಆದೇಶದವರೆಗೆ ಮುಂದಿನoತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶಿಸಿದ್ದಾರೆ.

ಕಂಟೈನ್‌ಮೆoಟ್ ವಲಯಗಳಲ್ಲಿ ಚಟುವಟಿಕೆಗಳನ್ನು ನಿಷೇಧಿಸುವ ಕುರಿತು:- ಕಂಟೈನ್‌ಮೆoಟ್ ವಲಯಗಳಲ್ಲಿ ಸಂಪೂರ್ಣ ಲಾಕ್ ಡೌನ್ ಇರುತ್ತದೆ. ವೈದ್ಯಕೀಯ ತುರ್ತುಸೇವೆಗಳು ಮತ್ತು ಅವಶ್ಯಕತೆಗಳು ಹಾಗೂ ಅಗತ್ಯ ವಸ್ತುಗಳು ಮತ್ತು ಸೇವೆಗಳ ಪೂರೈಕೆಗಳನ್ನು ಕಾಪಾಡಿಕೊಳ್ಳಲು ಅನುಮತಿಯನ್ನು ನೀಡಲಾಗಿದ್ದು,  ಇವುಗಳ ಹೊರತು ಕಂಟೈನ್‌ಮೆoಟ್ ವಲಯದ ಒಳಗೆ ಹಾಗೂ ಹೊರಗೆ ಜನರ ಚಲನ ವಲನಗಳನ್ನು ನಿಷೇಧಿಸಲಾಗಿದೆ.

ಕಂಟೈನ್‌ಮೆoಟ್ ವಲಯಗಳ ಹೊರಗಿನ ಪ್ರದೇಶದಲ್ಲಿ ಚಟುವಟಿಕೆಗಳು : 

  1. ಕಂಟೈನ್‌ಮೆoಟ್ ವಲಯಗಳ ಹೊರಗಿನ ಪ್ರದೇಶದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕಾಲಕಾಲಕ್ಕೆ ಹೊರಡಿಸಿದ ಸೂಚನೆಗಳು ಮತ್ತು ಕಾರ್ಯಚರಣೆಯ ಕಾರ್ಯವಿಧಾನಗಳ ಷರತ್ತುಗಳೊಂದಿಗೆ ನಡೆಸಲು ಅನುಮತಿಸಲಾಗಿದೆ. 
  2. ಆದರೆ ಸಾರ್ವಜನಿಕರಿಗೆ ಧಾರ್ಮಿಕ ಸ್ಥಳಗಳು/ಪೂಜಾ ಸ್ಥಳಗಳು ಹೋಟೆಲ್‌ಗಳು ರೆಸ್ಟೊರೆಂಟ್ ಗಳು ಮತ್ತು ಇತರ ಅತಿಥ್ಯ ಸೇವೆಗಳು, ಶಾಪಿಂಗ್ ಮಾಲ್‌ಗಳು ಚಟುವಟಿಕೆಗಳನ್ನು ಪ್ರಾರಂಭಿಸಲು ಅನುಮತಿಸಲಾಗಿದೆ. ಈ ಸಂಬoಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳಿಂದ ಹೊರಡಿಸಲಾದ ಮಾರ್ಗಸೂಚಿಯ ಷರತ್ತುಗಳನ್ನು ಪಾಲಿಸತಕ್ಕದು. 
  3. ದೇವಸ್ಥಾನ ,ಚರ್ಚ್, ಮಸೀದಿಗಳನ್ನು ಸಾರ್ವಜನಿಕ ದರ್ಶನಕ್ಕೆ ಮಾತ್ರ ಸೀಮಿತವಾಗಿದೆ. ಈ ಸಮಯದಲ್ಲಿ ಒಮ್ಮೆಗೆ ಅರ್ಚಕರು ಮೌಲ್ಯಿಗಳು/ಧರ್ಮಗುರುಗಳು/ಭಕ್ತಾಧಿಗಳು ಸೇರಿ 20 ಜನರಿಗಿಂತ ಜಾಸ್ತಿ ಇರತಕ್ಕದಲ್ಲ. ಯಾವುದೇ ವಿಶೇಷ ಪೂಜೆಗಳು/ಧಾರ್ಮಿಕ ಆಚರಣೆಗಳು ಇರುವುದಿಲ್ಲ.
  4. ಸಾರ್ವಜನಿಕವಾಗಿ ಹಬ್ಬ ಆಚರಣೆಗಳು ಇರುವುದಿಲ್ಲ.
  5.  ವಿವಾಹದ ಸಂದರ್ಭಗಳಲ್ಲಿ ಸಾಮಾಜಿಕ ಅಂತರವನ್ನು ಖಾತರಿಪಡಿಸಿಕೊಂಡು, ಗರಿಷ್ಟ 50 ಜನರನ್ನು ಮಾತ್ರ ಆಹ್ವಾನಿಸತಕ್ಕದ್ದು. ಈ ಬಗ್ಗೆ ಹೊರಡಿಸಲಾದ ಸರಕಾರದ ಎಲ್ಲಾ ನಿಯಾಮಾವಳಿಗಳನ್ನು ಪಾಲಿಸುವುವುದು. ಈ ಬಗ್ಗೆ ಕಡ್ಡಾಯವಾಗಿ ಸಂಬoಧ ಪಟ್ಟ ತಹಶಿಲ್ದಾರರಿಂದ ಪೂರ್ವಾನುಮತಿ ಪಡೆಯುವುದು.
  6. ಶವ ಸಂಸ್ಕಾರ ಸಮಯದಲ್ಲಿ ಸಾಮಾಜಿಕ ಅಂತರವನ್ನು ಖಾತರಿಪಡಿಸಿಕೊಳ್ಳುವುದು ಮತ್ತು ಗರಿಷ್ಠ 20  ಜನರಿಗಿಂತ ಹೆಚ್ಚು ಸೇರಬಾರದು.
  7. ಅಂಗಡಿಗಳ  ಮಾಲಿಕರು  ಮತ್ತು ಗ್ರಾಹಕರ ನಡುವೆ ಕನಿಷ್ಟ ಆರು ಅಡಿ ದೂರದಲ್ಲಿರುವುದನ್ನು (2 ಗಜ್ ಕಿ ದೂರಿ) ಖಚಿತ ಪಡಿಸಿಕೊಳ್ಳುವುದು. ಮತ್ತು ಅಂಗಡಿಗಳಲ್ಲಿ  5ಕ್ಕೂ ಹೆಚ್ಚು ವ್ಯಕ್ತಿಗಳನ್ನು ಅನುಮತಿಸಬಾರದು.( ಸ್ವಯಂಪ್ರೇರಿತವಾಗಿ  ಅಂಗಡಿ ಮುಂಗಟ್ಟುಗಳನ್ನು  ಬಂದ್  ಮಾಡಲು ಮಾಲೀಕರೇ ನಿರ್ಧರಿಸಿದ್ದಲ್ಲಿ ಜಿಲ್ಲಾಡಳಿತ ಅಭ್ಯಂತರವಿಲ್ಲ.)
  8. ಬೆಳಗ್ಗೆ 5 ರಿಂದ ರಾತ್ರಿ 8 ರ ವರೆಗೆ ಉಡುಪಿ ಜಿಲ್ಲೆಯೊಳಗೆ ಸಂಚರಿಸಲು ಅವಕಾಶ  ಕಲ್ಪಿಸಲಾಗಿದೆ.ಸಾಮಾಜಿಕ ಅಂತರವನ್ನು ಕಡ್ಡಾಯ ವಾಗಿ ಕಾಯ್ದುಕೊಳ್ಳತಕ್ಕದ್ದು.ಹಾಗೂ ಸರ್ಕಾರದ ಮಾರ್ಗ ಸೂಚಿಯನ್ನು ಕಡ್ಡಾಯ ವಾಗಿ ಪಾಲಿಸತಕ್ಕದ್ದು. ರಾತ್ರಿ 8 ರಿಂದ ಬೆಳಗ್ಗೆ  5 ರ ವರೆಗೆ  ಸಾರ್ವಜನಿಕ ಸಂಚಾರವನ್ನು ನಿರ್ಭಂಧಿಸಲಾಗಿದೆ. ಈ ಕಪ್ಯೂ೯ ಅವಧಿಯಲ್ಲಿ  ಅತ್ಯಗತ್ಯ ಚಟುವಟಿಕೆಗಳನ್ನು ಹೊರತು ಪಡಿಸಿ ಉಳಿದಂತೆ  ವ್ಯಕ್ತಿಗಳ ಚಲನೆಯನ್ನು ಕಟ್ಟು ನಿಟ್ಟಾಗಿ  ನಿಷೇಧಿಸಲಾಗಿದೆ.
  9. ಮುಂದಿನ ಭಾನುವಾರಗಳು ಅಂದರೆ ಆಗಸ್ಟ್ 2  ರ ವರೆಗಿನ ಎಲ್ಲಾ ಭಾನುವಾರಗಳಂದು ಪೂರ್ಣ ದಿನದ ಲಾಕ್ ಡೌನ್ ಇರತಕ್ಕದ್ದು ಆದರೆ ಅಗತ್ಯ ಸರಕು ಸರಂಜಾಮುಗಳ ಸಾಗಾಣಿಕೆ ಯಾವುದೇ ನಿರ್ಭಂಧವಿರುವುದಿಲ್ಲ.
  10. ಪೆಟ್ರೋಲ್ ಪಂಪ್/ಮೆಡಿಕಲ್/ಕ್ಲಿನಿಕಲ್ ಲ್ಯಾಬ್/ ಆಸ್ವತ್ರೆ /ಹಾಲು/ ದಿನಪತ್ರಿಕೆ  ಮಾರಾಟಕ್ಕೆ  ನಿರ್ಭಂಧವಿರುವುದಿಲ್ಲ. ಹೊಟೇಲ್ ಗಳಿಂದ ಪಾರ್ಸೆಲ್ ಗಳಿಗೆ ,ಪುಡ್ ಡೆಲಿವರಿಗೆ ಅವಕಾಶವಿದೆ.
  11. ಜುಲೈ 15 ರ  ಸಂಜೆ 8. ರಿಂದ 29   ರ ವರೆಗೆ 14  ದಿನಗಳವರೆಗೆ ಜಿಲ್ಲೆಯ ಗಡಿಗಳನ್ನು ಸೀಲ್ ಡೌನ್ ಮಾಡಲಾಗುವುದು. (ತುರ್ತು ವೈದ್ಯಕೀಯ ಪ್ರಕರಣಗಳನ್ನು ಹೊರತು ಪಡಿಸಿ ) ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕ ಬಸ್ ಸಂಚಾರ ಮತ್ತು ಯಾವುದೇ ಸಂತೆಗಳು ಇರುವುದಿಲ್ಲ. ಹೊರಜಿಲ್ಲೆ ಯಿಂದ ಹಾಗೂ  ರಾಜ್ಯದಿಂದ ಬರುವವರು ಹಾಗೂ ಹೋಗುವವರು 15 ರ ಸಂಜೆ 8 ಗಂಟೆಯ ಒಳಗಾಗಿ ಹೋಗಲು/ ಬರಲು ಅವಕಾಶ ನೀಡಿದೆ.
  12. ಜಿಲ್ಲೆಯ ಒಳಗೆ ಎಲ್ಲಾ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿರುತ್ತದೆ. ಅಂತರರಾಜ್ಯ /ಅಂತರಜಿಲ್ಲಾ  ಸರಕು ಸಾಗಾಣಿಕೆ /ವಸ್ತುಗಳ  ಸಾಗಣಿಕೆಗೆ ಯಾವುದೇ ನಿರ್ಬಂಧವಿರುವುದಿಲ್ಲ.
  13. ಕoಟೈನ್ ಮೆಂಟ್  ವಲಯ ಮತ್ತು ಹೊರ ವಲಯ ಗಳಲ್ಲಿ ಕೋವಿಡ್ 19 ನಿರ್ವಹಣೆಗೆ ಸಂಬoಧಿಸಿದoತೆ
  14. ಸಾರ್ವಜನಿಕರು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ  ಮುಖಗವಸನ್ನು ಕಡ್ಡಾಯವಾಗಿ ಧರಿಸುವುದು. ಮತ್ತು ಎಲ್ಲಾ ವ್ಯಕ್ತಿಗಳು ಸಾಮಾಜಿಕ ಅಂತರವನ್ನು ಅನುಸರಿಸುವುದು. ಉಲ್ಲಂಘನೆಗಾಗಿ  ನಿಗಧಿತ ಅಧಿಕಾರಿಗಳು ನಿಗದಿಪಡಿಸಿದ ದಂಡವನ್ನು ವಿಧಿಸುವುದು./ಕಾನೂನು ಕ್ರಮ ವಹಿಸುವುದು.
  15. ಸ್ಥಳೀಯ ಪ್ರಾಧಿಕಾರಗಳು ಅದರ ಕಾನೂನುಗಳು ,ನಿಯಮಗಳು ಅಥವಾ ನಿಭಂಧನೆಗಳಿಗೆ ಅನುಗುಣವಾಗಿ  ಸಾರ್ವಜನಿಕ ಸ್ಥಳಗಳಲ್ಲಿ  ಉಗಿಯುದನ್ನು ನಿರ್ಭಂಧಿಸಿದೆ. ಹಾಗೂ ಉಲ್ಲಂಘನೆಗಾಗಿ ನಿಗದಿಪಡಿಸಿದ ದಂಡವನ್ನು ವಿಧಿಸುವುದು.
  16. ಸಾರ್ವಜನಿಕ ಸ್ಥಳಗಳಲ್ಲಿ  ಮಧ್ಯಪಾನ,ಗುಟ್ಕಾ, ತಂಬಾಕು ಇತ್ಯಾದಿಗಳ  ಬಳಕೆಗೆ ಅವಕಾಶ ವಿಲ್ಲ.ಬೃಹತ್ ಸಾರ್ವಜನಿಕ ಸಭೆಗಳು  /ಒಟ್ಟು  ಗೂಡುವಿಕೆಗಳನ್ನು  ನಿಷೇಧವನ್ನು ಮುಂದುವರಿದಿದೆ.
  17. ಎಲ್ಲಾ ರಾಜಕೀಯ /ಸಾಮಾಜಿಕ ಕ್ರೀಡಾ /ಮನೊರಂಜನಾ /ಶೈಕ್ಷಣಿಕ / ಸಾಂಸ್ಕ್ರತಿಕ , ಧಾರ್ಮಿಕ ಇತರ ಜನಸೇರುವ ಕಾರ್ಯಕ್ರಮಗಳನ್ನು ನಿರ್ಬಂದಿಸಿದೆ.
  18. ನಾಟಕಗಳು, ಯಕ್ಷಗಾನಗಳನ್ನು ನಡೆಸುವಂತಿಲ್ಲ. ಮತ್ತು ರಂಗ ಮಂದಿರಗಳನ್ನು ತೆರೆಯುವಂತಿಲ್ಲ.
  19.  ಶಾಲೆಗಳು , ಕಾಲೇಜುಗಳು ವಿಶ್ವ ವಿದ್ಯಾನಿಲಯಗಳು ,ವಾಣಿಜ್ಯ ಶಾಲೆಗಳನ್ನು ,ಟ್ಯುಟೋರಿಯಲ್ ಮತು ಕೋಚಿಂಗ್  ಸೆಂಟರ್ ಗಳನ್ನು ಬಂದ್ ಮಾಡಲಾಗಿದ್ದು ಅವುಗಳನ್ನು ತೆರೆಯತಕ್ಕದ್ದಲ್ಲ. ಆನ್ ಲೈನ್ /ಡಿಸ್ಟೆಂಸ್  ಲರ್ನಿಂಗ್ ಗೆ ನಿಯಮದನ್ವಯ ಅವಕಾಶ ಕಲ್ಪಿಸಲಾಗಿದೆ.
  20.  ಸಿನಿಮಾ ಹಾಲ್ ಗಳು /ಥಿಯೆಟರ್ ,ಜಿಮ್ ಗಳು ,ಈಜುಕೊಳಗಳು ಮನರಂಜನಾ ಪಾರ್ಕ್ ಗಳು ಮತ್ತು ಅಂತಹ ಸ್ಥಳಗಳು ಬಾರ್ ಗಳು ಮತ್ತು  ಸಭಾಂಗಣಗಳು ,ಅಸೆಂಬ್ಲಿ  ಹಾಲ್ ಗಳನ್ನು ತೆರೆಯತಕ್ಕದ್ದಲ್ಲ.
  21.  65 ವರ್ಷ  ಜಾಸ್ತಿ ಪ್ರಾಯದ ವ್ಯಕ್ತಿಗಳು ಹಾಗೂ 10 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳು  ಮತ್ತು ಗರ್ಭೀಣಿಯರು  ,ಅಸ್ವಸ್ಥರು ,ತುರ್ತು ವೈಧ್ಯಕೀಯ ಕಾರಣ ಹೊರತು ಪಡಿಸಿ ಮನೆಯಿಂದ ಹೊರಗೆ ಬರುವುದು ಸೂಕ್ತವಲ್ಲ.

    ಮೇಲಿನ ಆದೇಶಗಳನ್ನು ಪಾಲಿಸದೇ ಇದ್ದವರ ಮೇಲೆ  ಪೋಲಿಸ್ ಠಾಣೆಗಳಲ್ಲಿ  ಕ್ರಿಮಿನಲ್  ಪ್ರಕರಣಗಳನ್ನು  Disaster Management Act  2005 ಸಾಂಕ್ರಮಿಕ ರೋಗಗಳ ಕಾಯ್ದೆ  1897 ಮತ್ತು IPC ಸೆಕ್ಷನ್ 188 ಪ್ರಕಾರ  ಕ್ರಮಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.