ಉಡುಪಿ : ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ  ಕರಾವಳಿ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಕೈಗೊಂಡ ಕಾಮಗಾರಿಗಳ ಪರಿಶೀಲನೆಯನ್ನು ಪ್ರಾಧಿಕಾರದ ಮಾನ್ಯ ಆಧ್ಯಕ್ಷರಾದ  ಮಟ್ಟಾರು ರತ್ನಾಕರ ಹೆಗ್ಡೆಯವರು ನಡೆಸಿದರು.

     ಡಾ ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಪ್ರವಾಸಿಗರ  ಸೌಕರ್ಯಕ್ಕಾಗಿ ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ಮತ್ತು ಕರಾವಳಿ ಅಭಿವೃದ್ದಿ  ಪ್ರಾಧಿಕಾರದ ಅನುದಾನದಿಂದ ಖರೀದಿಸಿದ ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ವಾಹನಗಳ ವಿವರಣೆಯನ್ನು  ಮತ್ತು  ನಿಸರ್ಗಧಾಮದಲ್ಲಿ  ಇನ್ನು ಆಗಬೇಕಾದ  ಕಾಮಗಾರಿಗಳ ಪಟ್ಟಿಯನ್ನು ನೀಡಿ  ಅನುದಾನ ಮಂಜೂರು ಮಾಡಲು ಕಾರ್ಯನಿರ್ವಾಹಕ ನಿರ್ದೇಶಕರು ಕೋರಿದರು.  ಈ ಬಗ್ಗೆ ಪ್ರಾಧಿಕಾರದ ಅಧ್ಯಕ್ಷರು,ಸಕರಾತ್ಮಕವಾಗಿ ಸ್ಪಂದಿಸಿ  ಮುಂದಿನ ದಿನಗಳಲ್ಲಿ ಸದರಿ ಕಾಮಗಾರಿಗಳನ್ನು  ನಡೆಸುವ ಬಗ್ಗೆ ಸಮ್ಮತಿಯನ್ನು ಸೂಚಿಸಿದರು.

 ಪರಿಶೀಲನೆ ವೇಳೆ ಹಾಜರಿದ್ದ  ಜೈವಿಕ ಉದ್ಯಾನದ ನಿರ್ದೇಶಕರು  ಪಿಲಿಕುಲವು ನಡೆದು ಬಂದ ದಾರಿ ಹಾಗೂ  ಈವರೆಗೆ ಕೇಂದ್ರ ,ರಾಜ್ಯ,ಬ್ಯಾಂಕ್ ಸಂಘ ಸಂಸ್ಥೆಗಳು ಮತ್ತು ಪ್ರವೇಶ ಶುಲ್ಕದಿಂದ ನಡೆಸಿರುವ ಅಭಿವೃಧ್ದಿಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.

          ಕಾರ್ಯಕ್ರಮದಲ್ಲಿ  ಯು.ಪಿ ಇಬ್ರಾಹಿಂ, ಜಿಲ್ಲಾ ಪಂಚಾಯತ್ ಸದಸ್ಯರು, ದ.ಕ ಜಿಲ್ಲೆ , ,ಮೂಡುಶೆಡ್ಡೆ ಗ್ರಾಮ ಪಂಚಾಯತ್  ಆಧ್ಯಕ್ಷರಾದ   ಹರಿಪ್ರಸಾದ್ ಶೆಟ್ಟಿ,ಪ್ರಾಧಿಕಾರದ ಕಾರ್ಯದರ್ಶಿಯವರಾದ  ಪ್ರದೀಪ್  ಡಿಸೋಜಾ, ಡಾ ಶಿವರಾಮ ಕಾರಂತ ಪಿಲಿಕುಳ ಜೈವಿಕ ಉದ್ಯಾವನದ ನಿರ್ದೇಶಕರಾದ ಜಯಪ್ರಕಾಶ್ ಭಂಡಾರಿ, ಪ್ರಾಧಿಕಾರದ ವಲಯಧಿಕಾರಿ ಚಂದ್ರಕಾoತ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರು, ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.