ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಸ್ತವ್ಯ /ವಾಣಿಜ್ಯ ನೀರಿನ ಬಳಕೆದಾರರು ನಳ್ಳಿ ನೀರಿನ ಜೋಡಣೆ ಬಾಬ್ತು ಪ್ರತೀ ತಿಂಗಳ ನೀರಿನ ಶುಲ್ಕಗಳನ್ನು ನಿಗಧಿತ ಅವಧಿಯೊಳಗೆ ಪಾವತಿಸುವಂತೆ ಹಾಗೂ ಬಾಕಿ ಮಾಡಿಕೊಂಡಿರುವ ನಳ್ಳಿ ನೀರಿನ ಶುಲ್ಕವನ್ನು ಒಂದು ವಾರದೊಳಗೆ ಪಾವತಿಸುವಂತೆ ಸೂಚಿಸಲಾಗಿದೆ.ತಪ್ಪಿದ್ದಲ್ಲಿ ನಳ್ಳಿ ನೀರಿನ ಜೋಡಣೆಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಇದಕ್ಕೆ ಅವಕಾಶ ಕೊಡದೇ ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.