ಉಡುಪಿ (ಜುಲೈ 13): ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದ ನಿಟ್ಟಿನಲ್ಲಿ ನಗರಾಭಿವೃದ್ದಿ ಕಾಮಗಾರಿಗಳು ,ಕುಡಿಯುವ ನೀರು ಯೋಜನೆ, ಒಳಚರಂಡಿ ಯೋಜನೆಗಳು ಪ್ರಕ್ರಿಯೆಯಲ್ಲಿದೆ ಎಂದು ನಗರಾಭಿವೃದ್ದಿ ಇಲಾಖೆ ಸಚಿವ ಬಸವರಾಜ್ ಹೇಳಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಾಪು ವಿದಾಸಭಾ ಕ್ಷೇತ್ರದ ನಿಟ್ಟಿನಲ್ಲಿ ಕುಡಿಯುವ ನೀರಿನ ಯೋಜನೆಗೆ ಸುಮಾರು 46 ಕೋಟಿ ರೂ ವೆಚ್ಚದಲ್ಲಿ ಆಡಳಿತಾತಮ್ಮಕ ಅನುಮೋದನೆಯನ್ನು ನೀಡಿ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು. ಇಲ್ಲಿ ಲ್ಯಾಂಡ್ ಸಮಸ್ಯೆ ಇದ್ದು ಜಿಲ್ಲಾಧಿಕಾರಿಗಳಿಗೆ ಇತ್ಯರ್ಥ ಮಾಡಿಕೊಳ್ಳಲು ಸೂಚನೆಯನ್ನು ನೀಡಲಾಗಿದೆ. ಎಂದರು.
ಉಡುಪಿ ನಗರಸಭೆಯ ಒಳಚರಂಡಿ ವ್ಯವಸ್ಥೆ ಯನ್ನು ಮಾಡಿ 14 ವರ್ಷಗಳಾಗಿವೆ. ಇದನ್ನು ಮರು ವಿನ್ಯಾಸದ ಮೂಲಕ ಹೊಸ ರೀತಿಯಲ್ಲಿ ಮಾಡಬೇಕಾಗಿ ಪ್ರಸ್ತಾವನೆಯನ್ನು ಮಾಡಲು ಶಾಸಕ ರಘುಪತಿ ಭಟ್ ಕೋರಿದ್ದು, . ಈ ನಿಟ್ಟಿನಲ್ಲಿ ಡಿ ಪಿ ಆರ್ ಮಾಡಿ ಸಲ್ಲಿಸಲು ಸೂಚನೆ ನೀಡಿಲಾಗಿದೆ ಎಂದರು. ಅದೇ ರೀತಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಿಪಡಿಸುವಂತೆ ತಿಳಿಸಿದರು.
ಉಡುಪಿ ಪ್ರಾದಿಕಾರದಿಂದ ಬಡಾವಣೆ ಗಳನ್ನು ನಿರ್ಮಾಣ ಮಾಡಲು ಸೂಚನೆಯನ್ನು ಕೂಡ ನೀಡಲಾಗಿದೆ. ಶೇ 50 -50 ಹಂಚಿಕೆ ಪ್ರಮಾಣದಲ್ಲಿ ಜಮೀನನನ್ನು ಪಡೆದು , ನಿವೇಶನ ವಾಗಿ ಅಭಿವೃದ್ದಿ ಪಡಿಸಿ ವಿತರಣೆಗೆ ಬಡಾವಣೆ ಮಾಡಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದರು.
ಪತ್ರಕರ್ತರು ಸಾರ್ವಜನಿಕವಾಗಿ ಸರ್ಕಾರಕ್ಕೆ ಮತ್ತು ಜನತೆಗೆ ಸಹಾಕರವನ್ನು ನಿಡುತ್ತಾ ಬಂದಿದ್ದಾರೆ. ಪ್ರಾಧಿಕಾರದಿಂದ ಅಭಿವೃದ್ದಿ ಪಡಿಸುವ ಬಡಾವಣೆಗಳಲ್ಲಿ ಪತ್ರಕರ್ತರಿಗೆ ಶೇ 5% ಮೀಸಲಾತಿ ನೀಡಬೇಕು ಎಂಬ ಸುತ್ತೊಲೆಯನ್ನು 2 ದಿನದಲ್ಲಿ ಹೊರಡಿಸಲಾಗುವುದು. ಕಾರ್ಕಳದಲ್ಲಿಯು ಕಾಮಗಾರಿ ವೆಚ್ಚಗಳು ನಡೆಯುತ್ತಿದ್ದು ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ವ್ಯಾಪ್ತಿಯಲ್ಲಿ ಕಾಮಗಾರಿ ಪೂರ್ಣ ಗೊಂಡಿದ್ದು ಉದ್ಗಾಟನೆ ಮಾಡಲು ಮಾನ್ಯ ಮುಖ್ಯಮಂತ್ರಿಗಳ ದಿನಾಂಕವನ್ನು ನಿಗದಿ ಮಾಡಿ ಉದ್ಟಾಟನೆ ಮಾಡಲಾಗುವುದು ಎಂದರು.
ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆ ಆದವರಿಗೆ , ರಿರ್ಸವೇಷನ್ ಬಗ್ಗೆ 3-4 ಸಭೆ ನಡೆಸಿ, ಅಂತಿಮಾ ತಿರ್ಮಾನ ಮಾಡಿ , ಅದನ್ನು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸುವ ಪ್ರಕ್ರಿಯೆ ನಡೆಯಲಿದೆ. ನಂತರದಲ್ಲಿ ಅಧ್ಯಕ್ಷ ಮತ್ತು ಉಪದ್ಯಾಕ್ಷ ಚುನಾವಣೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಭೆಯಲ್ಲಿ ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್, ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.