ಉಡುಪಿ : ಅಂಚೆ ಇಲಾಖೆಯು Dear Bapu (Mahathma Gandhi), You are Immortal ಎಂಬ ವಿಷಯದ ಕುರಿತು 18 ವರ್ಷದ ಒಳಗಿನವರಿಗೆ ಮತ್ತು 18 ವರ್ಷ ಮೇಲ್ಪಟ್ಟವರಿಗೆ ಮುಕ್ತವಾಗಿ ಪತ್ರ ಲೇಖನ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.

ಸ್ಪರ್ಧಾಳುಗಳು ಹಿಂದಿ/ ಇಂಗ್ಲಿಷ್ ಅಥವಾ ಪ್ರಾದೇಶಿಕ ಭಾಷೆಯಲ್ಲಿ, ಅಂತರ್ದೇಶೀಯ ಪತ್ರ (In Land Letter)500 ಶಬ್ಧಗಳು ಮೀರದಂತೆ ಬರೆದು, ಅಥವಾ A4ಹಾಳೆಯಲ್ಲಿ 1000 ಶಬ್ಧಗಳು ಮೀರದಂತೆ ಲೇಖನವನ್ನು ಕೈ ಬರಹದಲ್ಲಿ ಬರೆದು ಲಕೋಟೆಯಲ್ಲಿ ತುಂಬಿಸಿ, ಅಂಚೆ ಅಧೀಕ್ಷಕರು, ಉಡುಪಿ ಅಂಚೆ ವಿಭಾಗ, ಉಡುಪಿ ಇವರಿಗೆ ನವೆಂಬರ್ 30 ರ ಒಳಗೆ ತಲುಪಿಸಬೇಕು.

ಸ್ಪರ್ಧಾಳುಗಳು ತಮ್ಮ ಲೇಖನದ ಮೇಲೆ 18 ವರ್ಷ ಮೇಲಿನವರು/ 18 ವರ್ಷದ ಕೆಳಗಿನವರು ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸಬೇಕು. ಅತ್ಯುತ್ತಮ ಮೂರು ಕೃತಿಗಳಿಗೆ ಬಹುಮಾನಗಳನ್ನು ದೇಶೀಯ ಮಟ್ಟದಲ್ಲಿ ಕ್ರಮವಾಗಿ 50000 ರೂ., 25000 ರೂ., 10000 ರೂ,. ಮತ್ತು ಕರ್ನಾಟಕ ವೃತ್ತ ಮಟ್ಟದಲ್ಲಿ 25000 ರೂ., 10000 ರೂ., ಮತ್ತು 5000., ವನ್ನು ಘೋಷಿಸಲಾಗುವುದು. ಭಾರತೀಯ ಅಂಚೆ ಇಲಾಖೆಯ ವತಿಯಿಂದ ನಡೆಯುವ ಈ ಪತ್ರ ಲೇಖನ ಸ್ಪರ್ಧೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಮತ್ತು ಬಹುಮಾನ ಗೆಲ್ಲುವಂತೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.