ಉಡುಪಿ : ಅನ್ನಭಾಗ್ಯ ಯೋಜನೆಯಡಿ ದುರ್ಬಲ ಕುಟುಂಬಗಳಿಗೆ ನೀಡುವ ಬಿಪಿಎಲ್ ಕಾರ್ಡ್‍ನ್ನು ಆರ್ಥಿಕವಾಗಿ ಸದೃಢವಾದ ಕೆಲವು ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆಯುವ ಬಗ್ಗೆ ಮಾನದಂಡವನ್ನು ಉಲ್ಲಂಘಿಸಿ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡು ಕೆಳಕಂಡಂತೆ ಸರ್ಕಾರಕ್ಕೆ ವಂಚನೆ ಮಾಡಿರುವುದು ಕಂಡು ಬರುತ್ತದೆ.
ಆದಾಯ ತೆರಿಗೆ ಪಾವತಿಸುತ್ತಿರುವ ಮತ್ತು 1000 ಚದರದಡಿಗಿಂತ ದೊಡ್ಡದಾದ ಪಕ್ಕ ಮನೆ ಹೊಂದಿರುವ ಕೆಲವು ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದು ವಂಚಿಸಿದ ಬಗ್ಗೆ.
ಶಿಕ್ಷಣ (ಅನುದಾನಿತ ಶಾಲಾ ಕಾಲೇಜು ನೌಕರರು)/ಸಾರಿಗೆ/ವಿದ್ಯುತ್/ರೈಲ್ವೆ/ಪೊಲೀಸ್/ ಮೊದಲಾದ ಇಲಾಖೆಗಳಲ್ಲಿ ಸರ್ಕಾರಿ ನೌಕರಿ ಮಾಡುತ್ತಿರುವ ಕೆಲವರು ತಮ್ಮ ಹೆಸರನ್ನು ತೆಗೆದು ಕುಟುಂಬದ ಇತರ ಸದಸ್ಯರ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಪಡೆದು ವಂಚಿಸಿದ ಬಗ್ಗೆ.
ಸಹಕಾರಿ ಸಂಘಗಳ ನೌಕರರು/ನಿಗಮ ಮತ್ತು ಮಂಡಳಿ ನೌಕರರು/ಬ್ಯಾಂಕ್/ಆಸ್ಪತ್ರೆ ನೌಕರರು/ಆಡಿಟರ್ಸ್ ದೊಡ್ಡ ಮತ್ತು ಹೋಟೇಲ್ ಮಾಲೀಕರು/ವರ್ತಕರು ಬಿಪಿಎಲ್ ಕಾರ್ಡ್ ಪಡೆದು ವಂಚಿಸಿದ ಬಗ್ಗೆ.
ಸ್ವಂತ ಕಾರು, ಲಾರಿ, ಜೆಸಿಬಿ ಮೊದಲಾದ ವಾಹನ ಹೊಂದಿರುವವರು ಗುತ್ತಿಗೆದಾರರು, ಕಮಿಷನ್ ಎಜೆಂಟ್‍ದಾರರು, ಮನೆ ಮಳಿಗೆ ಕಟ್ಟಡವನ್ನು ಬಾಡಿಗೆ ನೀಡಿ ವರಮಾನ ಪಡೆಯುತ್ತಿರುವವರು, ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ದಿಮೆದಾರರು, ನಿವೃತ್ತಿ ವೇತನ ಪಡೆಯುತ್ತಿರುವ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಪಡೆದು ವಂಚಿಸಿದ ಬಗ್ಗೆ Karnataka Prevention Of Unauthorized Possession Of Ration Cards Order
ಸರ್ಕಾರವು ಬಿಪಿಎಲ್ ಪಡಿತರ ಚೀಟಿ ಪಡೆಯಲು 1,20,000/-ಆದಾಯ ಮಿತಿ ನಿಗಧಿ ಪಡಿಸಿದ್ದು ಆ ಆಧಾಯವನ್ನು ಮೀರಿದ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದು ವಂಚಿಸಿದ ಬಗ್ಗೆ.

ಮೇಲ್ಕಂಡ ಅನರ್ಹರು ಪಡೆದಿರುವ ಕಾರ್ಡ್‍ನ್ನು ಪತ್ತೆ ಹಚ್ಚಿ ರದ್ದು ಪಡಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಅದ್ದರಿಂದ ಆರ್ಥಿಕವಾಗಿ ಸದೃಡವಾಗಿರುವ ಕುಟುಂಬಗಳು ಹೊಂದಿರುವ ಕಾರ್ಡ್‍ನ್ನು ಸೆಪ್ಟೆಂಬರ್ 10 ರೊಳಗೆ ಹಿಂತಿರುಗಿಸಿ ಇಲ್ಲವಾದರೆ ಅಂತಹ ಅನರ್ಹ ಕಾರ್ಡ್‍ಗಳನ್ನು ಪತ್ತೆ ಹಚ್ಚಿ, ರದ್ದುಪಡಿಸಿ ಅವರ ವಿರುದ್ಧ ಈ ವರೆಗೆ ಪಡೆದಿರುವ ಆಹಾರ ಧಾನ್ಯಕ್ಕೆ ಮುಕ್ತ ಮಾರುಕಟ್ಟೆದರಕ್ಕೆ 3 ಪಟ್ಟು ಹೆಚ್ಚು ವಸೂಲಿ ಮಾಡಲಾಗುವುದು ಮತ್ತು  1977 ರ ಅನ್ವಯ ಕ್ರಮ ಜರುಗಿಸಲಾಗುವುದು ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.