ಉಡುಪಿ: ಬಾರ್ಕೂರು, ಹೇರಾಡಿ ನ್ಯಾಷನಲ್ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಯುವ ಸ್ಪಂದನ ಕೇಂದ್ರದ ಕುರಿತು ಮಾಹಿತಿ ಶಿಬಿರ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಯುವ ಸ್ಪಂದನ ಕೇಂದ್ರದ ಯುವ ಪರಿವರ್ತಕ ಗಣೇಶ್ ಕೊಕ್ಕರ್ಣೆ, ವಿದ್ಯಾರ್ಥಿಗಳಿಗೆ ಯುವ ಸ್ಪಂದನ ಕೇಂದ್ರದಲ್ಲಿ ಯುವ ಜನರಿಗೆ ದೊರೆಯುವ ಸೇವೆಗಳು, ಆರೋಗ್ಯ ಮತ್ತು ಜೀವನ ಶೈಲಿ ಹಾಗೂ ಸುರಕ್ಷತೆಯ ಕುರಿತು ಮಾಹಿತಿಯನ್ನು ನೀಡಿದರು.