ಉಡುಪಿ (ಅಕ್ಟೋಬರ್, 3): ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಮೀನು ಮಾರಾಟಕ್ಕೆ ಸುಸಜ್ಜಿತವಾದ ಮೀನು ಮಾರುಕಟ್ಟೆ ಇದ್ದರೂ ಸಹ ಇತ್ತೀಚೆಗೆ ಅನಧಿಕೃತವಾಗಿ ಪುಟ್‌ಪಾತ್‌ಗಳಲ್ಲಿ ಮೀನು ಮಾರಾಟ ಮಾಡುತ್ತಿರುವುದು ಮತ್ತು ಅನಧಿಕೃತವಾಗಿ ದ್ವಿ ಚಕ್ರ ವಾಹನಗಳಲ್ಲಿ ಮೀನು ಮಾರಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ.

    ಈ ಬಗ್ಗೆ ಸಾರ್ವಜನಿಕರಿಂದ ಮತ್ತು ಮೀನು ಮಾರಾಟದ ಮಹಿಳೆಯರಿಂದ ದೂರುಗಳು ಬಂದಿದ್ದು, ಇನ್ನು ಮುಂದೆ ಮೀನು ಮಾರುಕಟ್ಟೆ ಹೊರತುಪಡಿಸಿ ಬೇರೆ ಯಾವುದೇ ಸ್ಥಳಗಳಲ್ಲಿ ಮೀನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.

    ರಸ್ತೆ ಬದಿಯಲ್ಲಿ ಹಾಗೂ ಯಾವುದೇ ವಾಹನಗಳಲ್ಲಿ ಮೀನು ಮಾರಾಟ ಮಾಡುವುದು ಕಂಡುಬoದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದೆಂದು ಉಡುಪಿ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.