ಉಡುಪಿ: ಕೊವಿಡ್19 ಹೋರಾಟದಲ್ಲಿ ರೆಡ್ ಕ್ರಾಸ್ ಸಂಸ್ಥೆಯು ಸಮಾಜಮುಖಿಯಾದ ಕರ‍್ಯವನ್ನು ಆಯೋಜಿಸಿರುವುದು ಹೆಮ್ಮೆಯ ವಿಷಯವಾಗಿದೆ. ಇತ್ತೀಚಿಗಿನ ಕೊವಿಡ್19 ಹೋರಾಟದಲ್ಲಿ ಹೆಚ್ಚು ರಕ್ತದ ಅವಶ್ಯಕತೆ ಇರುವುದರಿಂದ ಈ ತುರ್ತು ಸಂದರ್ಭದಲ್ಲಿ  ರೆಡ್ ಕ್ರಾಸ್ ಸಂಸ್ಥೆಯು ರಕ್ತದಾನದ ಕರ‍್ಯಕ್ರಮವನ್ನು ಆಯೋಜಿಸಿ ಉತ್ತಮ ಸಹಕಾರವನ್ನು ನೀಡುತ್ತಿದೆ ಎಂದು ಶಾಸಕ ಕೆ. ರಘುಪತಿ.ಭಟ್ ಹೇಳಿದರು.

   ಅವರು ಬುಧವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶತಮಾನೋತ್ಸವ ದಿನಾಚರಣೆಯ ಅಂಗವಾಗಿ ರೆಡ್ ಕ್ರಾಸ್ ಭವನದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ  ಮಾತನಾಡಿದರು.

   ಉಡುಪಿ ಜಿಲ್ಲೆ ಹೆಚ್ಚು ರಕ್ತದಾನಿಗಳ ಜಿಲ್ಲೆಯಾಗಿದ್ದು,  ಕೋವಿಡ್-19 ರ ಈ ಅವಧಿಯಲ್ಲಿ ಉಂಟಾಗಿರುವ ರಕ್ತದ ಕೊರತೆಯನ್ನು ಜಿಲ್ಲೆಯ ರಕ್ತದಾನಿಗಳ ಸಹಕಾರದಿಂದ  ಪಡೆಯಲಾಗುತ್ತಿದೆ ಎಂದು ತಿಳಿಸಿದರು.

     ಕರ‍್ಯಕ್ರಮದಲ್ಲಿ ಕುಂದಾಪುರ ಭಾರತೀಯ ರೆಡ್ ಕ್ರಾಸ್ ಘಟಕದ ಸಭಾಪತಿ ಎಸ್. ಜಯಕರ್. ಶೆಟ್ಟಿ  ಉಡುಪಿ ಘಟಕದ ಉಪ ಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ, ಗೌರವ ಖಜಾಂಚಿ ಟಿ ಚಂದ್ರಶೇಖರ್, ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗದವರು, ರಕ್ತದಾನಿಗಳು ಉಪಸ್ಥಿತರಿದ್ದರು.

ಕರ‍್ಯಕ್ರಮವನ್ನು ಜಗದೀಶ್ ಆಚಾರ್ ನಿರ್ವಹಿಸಿದರು.