ಉಡುಪಿ (ಜೂನ್ 29 ):   ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಅನುಷ್ಠಾನದಲ್ಲಿರುವ , ಜಿಲ್ಲಾ ವಿಕಲಚೇತನರ ಪುರ್ನವಸತಿ ಕೇಂದ್ರ ಉಡುಪಿಯಲ್ಲಿ,  ಕಚೇರಿ ಸೇವಕ (ವಿದ್ಯಾರ್ಹತೆ :ಎಸ್.ಎಸ್.ಎಲ್.ಸಿ. ವೇತನ ರೂ.7000), ಮೊಬಿಲಿಟಿ ಇನ್‌ಸ್ಟ್ರಕ್ಟರ್(ವಿದ್ಯಾರ್ಹತೆ : ಸರ್ಟಿಫಿಕೇಟ್ ಕೋರ್ಸ್ ಇನ್ ಓ ಅಂಡ್ ಎಂ ವೇತನ ರೂ.8000) ತಾತ್ಕಾಲಿಕ ಹುದ್ದೆಗಳಿಗೆ ಗೌರವಧನ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

      ಅಸಕ್ತರು ಜುಲೈ 10 ರೊಳಗೆ , ವಿದ್ಯಾರ್ಹತೆಯ ಪ್ರತಿಯೊಂದಿಗೆ, ಕೈ ಬರಹದ ಅರ್ಜಿಯನ್ನು, ಕಾರ್ಯದರ್ಶಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೆಡ್‌ಕ್ರಾಸ್ ಭವನ, ಅಜ್ಜರಕಾಡು ಉಡುಪಿ ವಿಳಾಸಕ್ಕೆ ಅರ್ಜಿ ಸಲ್ಲಿಸುವಂತೆ , ಸದಸ್ಯ ಕಾರ್ಯದರ್ಶಿ , ಜಿಲ್ಲಾ ವಿಕಲಚೇತನರ ಪುರ್ನವಸತಿ ಕೇಂದ್ರ ಉಡುಪಿ ಅವರ ಪ್ರಕಟಣೆ ತಿಳಿಸಿದೆ.