ಉಡುಪಿ (ಜುಲೈ 13): ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011 ಮತ್ತು (ತಿದ್ದುಪಡಿ) ಅಧಿನಿಯಮ 2014 ರಡಿ ತೋಟಗಾರಿಕೆ ಇಲಾಖೆಯ ಮಣ್ಣು ವಿಶ್ಲೇಷಣೆ, ನೀರು ವಿಶ್ಲೇಷಣೆ, ಎಲೆ ವಿಶ್ಲೇಷಣೆ , ಸಾವಯವ ಗೊಬ್ಬರ ವಿಶ್ಲೇಷಣೆ ಸೇವೆಗಳನ್ನು ಅಳವಡಿಸಲಾಗಿರುತ್ತದೆ
ಸದರಿ ಸೇವೆಗಳನ್ನು ಪಡೆಯಲು ಇಚ್ಚಿಸುವ ರೈತರು ಹತ್ತಿರದ ಸೇವಾಸಿಂಧು ಕೇಂದ್ರಗಳ ಮುಖಾಂತರ https://serviceonline.gov.in/karnataka ತಂತ್ರಾoಶದಲ್ಲಿ ನೊಂದಾಯಿಸಿಕೊAಡು, ನಿಗದಿತ ಶಲ್ಕ ಪಾವತಿಸಿ, ಆನ್ ಲೈನ್ ಅರ್ಜಿಗಳನ್ನು ಸಲ್ಲಿಸಿ, ಸಂಬoದಪಟ್ಟ ಮಾದರಿಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಸಸ್ಯಪೋಷಕಾಂಶ, ಜೈವಿಕ ಕೇಂದ್ರ, ಅಂಚೆ ಪಟ್ಟಿಗೆ ಸಂಖ್ಯೆ:7648, ಹುಳಿಮಾವು, ಬನ್ನೇರುಘಟ್ಟ ಮುಖ್ಯ ರಸ್ತೆ, ಬೆಂಗಳೂರು-560076 ವಿಳಾಸಕ್ಕೆ ರವಾನಿಸಲು ಕೋರಿದೆ. ಮಾದರಿ ಸ್ವೀಕರಿಸಿದ ನಂತರ ನಿಗದಿತ ಅವಧಿಯೊಳಗೆ ವಿಶ್ಲೇಷಣಾ ವರದಿಯನ್ನು ಆನ್ ಲೈನ್ ನಲ್ಲಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ , ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ.), ಉಡುಪಿ ಜಿಲ್ಲೆ: 0820-2531950, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಉಡುಪಿ ತಾಲೂಕು: 0820-2522837, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.),ಕುoದಾಪುರ ತಾಲೂಕು: 08254-230813, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಕಾರ್ಕಳ ತಾಲೂಕು: 08258-230288 ಅವರನ್ನು ಸಂಪರ್ಕಿಸುವoತೆ ತೋಟಗಾರಿಕಾ ಇಲಾಖೆ ಪ್ರಕಟಣೆ ತಿಳಿಸಿದೆ.