ಉಡುಪಿ,(ಡಿಸೆಂಬರ್ 31) : ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎ ಪ್ರವರ್ಗದ ಅಧಿಸೂಚಿತ ದೇವಾಲಯಗಳಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಜನವರಿ 15 ರಂದು ಬೆಳಗ್ಗೆ 10.30 ರಿಂದ 11.15 ರ ವರೆಗೆ ನಡೆಯಲಿದ್ದು, ಅರ್ಜಿ ಸಲ್ಲಿಸಲು ಜನವರಿ 7 ಕೊನೆಯ ದಿನ ಹಾಗೂ ಜನವರಿ 20 ರಂದು ಬೆಳಗ್ಗೆ 10.15 ರಿಂದ 10.45 ರ ವರೆಗೆ ವಿವಾಹ ನಡೆಯಲಿದ್ದು, ಅರ್ಜಿ ಸಲ್ಲಿಸಲು ಜನವರಿ 10 ಕೊನೆಯ ದಿನವಾಗಿದೆ.

     ಫೆಬ್ರವರಿ 17 ರಂದು ಬೆಳಗ್ಗೆ 12 ರಿಂದ 12.30 ರ ವರೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಅರ್ಜಿ ಸಲ್ಲಿಸಲು ಫೆಬ್ರವರಿ 8 ಕೊನೆಯ ದಿನ ಹಾಗೂ ಫೆಬ್ರವರಿ 25 ರಂದು ಬೆಳಗ್ಗೆ 10.30 ರಿಂದ 11 ರ ವರೆಗೆ ಸಾಮೂಹಿಕ ವಿವಾಹ ನಡೆಯಲಿದ್ದು, ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ.

     ಜಿಲ್ಲೆಯ ಎ ಪ್ರವರ್ಗದ ಅಧಿಸೂಚಿತ ದೇವಾಲಯಗಳಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗಲು ಇಚ್ಛಿಸುವ ವಧು- ವರರು ಆಯಾಯ ದೇವಾಲಯಗಳ ಕಾರ್ಯನಿರ್ವಹಣಾಧಿಕಾರಿ / ಆಡಳಿತಾಧಿಕಾರಿ / ಅನುವಂಶಿಕ ಮೊಕ್ತೇಸರರು ಮತ್ತು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಿಂದ ಅರ್ಜಿಯನ್ನು ಪಡೆದು ವಿವಾಹಕ್ಕೆ ನಿಗಧಿಪಡಿಸಿದ ದಿನಾಂಕದ ಒಂದು ವಾರದ ಮುಂಚಿತವಾಗಿ ಅರ್ಜಿಯಲ್ಲಿ ತಿಳಿಸಿರುವ ದಾಖಲೆಗಳೊಂದಿಗೆ ಮರು ಸಲ್ಲಿಸುವಂತೆ ಜಿಲ್ಲಾ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾಧಾಯ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.