ಉಡುಪಿ (ಸೆಪ್ಟೆಂಬರ್, 18): 2014-15 ನೇ ಸಾಲಿನ ಹಿಂದಿ ಭಾಷಾ ಶಿಕ್ಷಕರ ನೇಮಕಾತಿಗೆ ಸಂಬoಧಿಸಿದoತೆ ಮೈಸೂರು ವಿಭಾಗದ ಪರಿಷ್ಕೃತ 1:1 ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇಲಾಖಾ ವೆಬ್‌ಸೈಟ್ www.schooleducation.kar.nic.in ರಲ್ಲಿ ಪ್ರಕಟಿಸಲಾಗಿದೆ.

    ಈ ಕುರಿತಂತೆ ಮೈಸೂರು ವಿಭಾಗದ ಅಭ್ಯರ್ಥಿಗಳು ಸೆಪ್ಟಂಬರ್ 22 ರ ವರೆಗೆ ಆಕ್ಷೇಪಣೆಗಳನ್ನು ವಿಭಾಗೀಯ ಕಾರ್ಯದರ್ಶಿಗಳು ಹಾಗೂ ಪದನಿಮಿತ್ತ ಸಹ ನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮೈಸೂರು ವಿಭಾಗ, ಮೈಸೂರು ಇಲ್ಲಿಗೆ ಮುದ್ದಾಂ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

    ಹೆಚ್ಚಿನ ಮಾಹಿತಿಗೆ ಸಹ ನಿರ್ದೇಶಕರು, ಮೈಸೂರು, ದೂರವಾಣಿ ಸಂಖ್ಯೆ: 0821-2422208 ನ್ನು ಸಂಪರ್ಕಿಸುವAತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.