ಉರ್ವ : ಸಾರ್ವಜನಿಕ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಹಾಗೂ ಕೆನರಾ ಹೈಸ್ಕೂಲ್ ಉರ್ವ ಇವರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಟೆನಿಸ್ ಪಂದ್ಯಾಟದಲ್ಲಿ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯ ಪ್ರೌಡ ಶಾಲಾ ವಿದ್ಯಾರ್ಥಿನಿಯರಾದ ಅನನ್ಯ ಪ್ರಭು, ಸಾತ್ವಿಕ ಜೈನ್, ವಿಸ್ಮಿತ, ನಯನ ಪ್ರಥಮ ಸ್ಥಾನ ಪಡೆದು ಬೆಂಗಳೂರಿನಲ್ಲಿ ನಡೆಯವ ರಾಜ್ಯಮಟ್ಟದ ಟೆನಿಸ್ ಪಂದ್ಯಾಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ.ಇವರಿಗೆ ಶಾಲಾ ದೈಹಿಕ ಶಿಕ್ಷಕರಾದ ಸಂತೋಷ್ ತರಬೇತಿ ನೀಡಿರುತ್ತಾರೆ. ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳಾ ಮಾರ್ಗದರ್ಶನ ನೀಡಿರುತ್ತಾರೆ.
2.ರಾಜ್ಯಮಟ್ಟಕ್ಕೆ ಆಯ್ಕೆ
ಸಾರ್ವಜನಿಕ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಹಾಗೂ ಕೆನರಾ ಹೈಸ್ಕೂಲ್ ಉರ್ವ ಇವರ ಸಹಯೋಗದಲ್ಲಿ ರಂದು ನಡೆದ ಜಿಲ್ಲಾ ಮಟ್ಟದ ಟೆನಿಸ್ ಪಂದ್ಯಾಟದಲ್ಲಿ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರಾದ ಮನ್ವಿತ ಶೆಟ್ಟಿ ಮತ್ತು ನೇತ್ರ ಪ್ರಥಮ ಸ್ಥಾನ ಪಡೆದು ಬೆಂಗಳೂರಿನಲ್ಲಿ ನಡೆಯವ ರಾಜ್ಯ ಮಟ್ಟದ ಟೆನಿಸ್ ಪಂದ್ಯಾಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ.
ಇವರಿಗೆ ಶಾಲಾ ದೈಹಿಕ ಶಿಕ್ಷಕರಾದ ಸಂತೋಷ್ ತರಬೇತಿ ನೀಡಿರುತ್ತಾರೆ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳಾ ಮಾರ್ಗದರ್ಶನ ನೀಡಿರುತ್ತಾರೆ.