ಕಾರ್ಕಳ: ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕ್ರತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ 20ನೇ ವರ್ಷಾಚರಣೆಯ ಸವಿನೆನಪಿಗಾಗಿ ಅಬ್ಬನಡ್ಕದ ಕುಂಟಲಗುಂಡಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಮಿನಿ ಸಭಾಂಗಣ ಮತ್ತು ಅಡುಗೆ ಕೊಠಡಿ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮ ಆದಿತ್ಯವಾರ ಜರಗಿತು.
ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷರಾದ ಅಬ್ಬನಡ್ಕ ಸತೀಶ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಕುಂಟಲಗುಂಡಿ ರಾಜು ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು. ಬೆಳ್ಮಣ್ಣು ಜೇಸಿಐನ ಅಧ್ಯಕ್ಷ ಇಂದಾರು ಸತ್ಯನಾರಾಯಣ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭಹಾರೈಸಿದರು.
ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸ್ಥಾಪಕಾಧ್ಯಕ್ಷ ವಿಠಲ ಮೂಲ್ಯ, ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ, ದಿನೇಶ್ ಪೂಜಾರಿ ಬಿರೋಟ್ಟು, ಸುರೇಶ್ ಪೂಜಾರಿ ಕಾಸ್ರಬೈಲು, ರಾಜೇಶ್ ಕೋಟ್ಯಾನ್, ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಉಪಾಧ್ಯಕ್ಷ ಬಾಲಕೃಷ್ಣ ಮಡಿವಾಳ, ಜೊತೆ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಕೋಶಾಧಿಕಾರಿ ಲೀಲಾ ನಾರಾಯಣ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ವೀಣಾ ಪೂಜಾರಿ, ಅಬ್ಬನಡ್ಕ ಶ್ರೀ ವನದುರ್ಗಾ ಸ್ವ-ಸಹಾಯ ಸಂಘದ ಅಧ್ಯಕ್ಷೆ ಲಲಿತಾ ಆಚಾರ್ಯ, ಸಂಘದ ಸದಸ್ಯರಾದ ಹರಿಣಾಕ್ಷಿ ಪೂಜಾರಿ, ಸುರೇಶ್ ದೇವಾಡಿಗ, ಅಶ್ವಿನಿ ಪೂಜಾರಿ, ಪದ್ಮಶ್ರೀ ಪೂಜಾರಿ, ಆರತಿ ಪೂಜಾರಿ, ಪುಷ್ಪ ಕುಲಾಲ್, ಮಂಜುನಾಥ ಆಚಾರ್ಯ, ಸುಲೋಚನಾ ಕೋಟ್ಯಾನ್, ಅಶ್ವಿನಿ ಪ್ರಭಾಕರ್, ಹರೀಶ್ ಪೂಜಾರಿ, ಸುರೇಶ್ ಪೂಜಾರಿ ಅಬ್ಬನಡ್ಕ, ಶರತ್ ದೇವಾಡಿಗ ಮೊದಲಾದವರಿದ್ದರು.