ಕಿನ್ನಿಗೋಳಿ:- ಸಮಾಜದೊಂದಿಗೆ ಬೆರೆತು ಒಂದಿಷ್ಟು ಒಳ್ಳೆಯ ಕೆಲಸಗಳಲ್ಲಿ ಕೈ ಜೋಡಿಸಿ ಮೂಲ್ಕಿ ಹೋಬಳಿಯಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದ ಕಿನ್ನಿಗೋಳಿ ಸಮೀಪದ ಪುನರೂರಿನ ವ್ಯಕ್ತಿ ಶಂಭು ದೇವಾಡಿಗ ಎಂಬವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.ತನ್ನ 62 ನೇ ವಯಸ್ಸಿನಲ್ಲೂ ಉತ್ಸಾಹ ಯುವಕನಂತೆ ಎಲ್ಲರ ಜತೆ ಬೆರೆತು ಸಮಾಜಮುಖಿ ಕೆಲಸಗಳಲ್ಲಿ ಕೈಜೋಡಿಸುತ್ತಾ ಬಂದಿರುವ ಶಂಭು ದೇವಾಡಿಗರವರು ಕೊರೊನಾ ಲಾಕ್ ಡೌನ್ ಎಪೆಕ್ಟ್ ನಿಂದಾನಿ ಮೃತಪಟ್ಟಿರುವುದು ಎಂದು ತಿಳಿದು ಬಂದಿದೆ.
ಕಳೆದ ಕೆಲವು ತಿಂಗಳ ಹಿಂದೆ ಕೊರೊನಾ ಲಾಕ್ ಡೌನ್ ಸಂದರ್ಭ ಎಲ್ಲಿಯೂ ಹೊರಗೆ ತಿರುಗಾಡಲೂ ಆಗದೇ ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದರು ಎನ್ನಲಾಗಿದೆ.ಶಂಭು ದೇವಾಡಿಗ ಮನೆಯಲ್ಲಿ ಒಬ್ಬರೇ ವಾಸಿಸುತ್ತಿರುವ ಕಾರಣ ಈತನ ಚಲನವಲನಗಳ ಬಗ್ಗೆ ಸಂಶಯ ಕಂಡು ಬಂದು ಪರಿಸರದ ನಿವಾಸಿಗಳು ಮನೆಯೊಳಗೆ ಬಂದು ನೋಡಿದಾಗ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಎಲ್ಲರ ಜತೆ ಆತ್ಮೀಯರಾಗಿದ್ದ ಶಂಭು ದೇವಾಡಿಗರು ಕಿನ್ನಿಗೋಳಿ ಬಸ್ಸು ಚಾಲಕ.ನಿರ್ವಾಹಕರಿಗೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು.ಮೂಲ್ಕಿ ಹೋಬಳಿಯಲ್ಲಿ ಯಾವುದೇ ಕಾರ್ಯಗಳು ನಡೆದರೂ ಸ್ವಯಂ ಸೇವಕರಾಗಿ ಪಾದರಸದಂತೆ ಪಾಲ್ಗೊಂಡು ಎಲ್ಲರಿಗೂ ಚಿರಪರಿಚಿತರಾಗಿದ್ದರು.ಮೂಲ್ಕಿ ಪೋಲಿಸರು ಸ್ಧಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ