ಕಿನ್ನಿಗೋಳಿ : ರಾಷ್ಟ್ರ ವ್ಯಾಪ್ತಿ ಹಬ್ಬಿಕೊಂಡಿರುವ ಕೊರೋನಾ ವೈರಸ್ ಭೀತಿಯನ್ನು ತಡೆಗಟ್ಟುವ ಸಲುವಾಗಿ ಕಿನ್ನಿಗೋಳಿಯ ಸಮಾನ ಮನಸ್ಕರು ಒಟ್ಟಾಗಿ 4 ದಿನಗಳ ಕಾಲ ಮಧ್ಯಾಹ್ನ ಗಂಟೆ 2 ರ ನಂತರ ಲಾಕ್ ಡೌನ್ ನಡೆಸಲು ನಿರ್ಧರಿಸಿದ್ದು ಕಿನ್ನಿಗೋಳಿಯಲ್ಲಿ ಮೊದಲ ದಿನದ ಸ್ವಯಂ ಪ್ರೇರಿತ ಲಾಕ್ ಡೌನ್ ಯಶಸ್ವಿಯಾಗಿದೆ.
ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿತ್ತು. ಕಿನ್ನಿಗೋಳಿಯ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರು, ಮತ್ತು ಉದ್ಯಮಿಗಳು ಒಟ್ಟಿಗೆ ಸೇರಿ ನಿರ್ಧಾರಕ್ಕೆ ಬಂದು ಕಿನ್ನಿಗೋಳಿ ವ್ಯಾಪ್ತಿಯಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳ ಮಾಲಕರು ಜನ ಸಂದಣಿ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಲ್ಲಿ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ.