ಕುಲಶೇಖರ:ಮೊಂತೆರೊರವರು ಹೃದಯಘಾತದಿಂದ ಸ್ವಗೃಹದಲ್ಲಿ ನಿಧನಹೊಂದಿದರು. ಮೃತರು ಜನವಾಹಿನಿ ದಿನ ಪತ್ರಿಕೆಯ ಪ್ರಸರಣ ವಿಭಾಗದಲ್ಲಿ ಸುಮಾರು ವರ್ಷಗಳ ಸೇವೆ ಸಲ್ಲಿಸಿ ತದ ನಂತರ ನಗರದ ಹೆಸರಾಂತ ಜಾಹಿರಾತು ಸಂಸ್ಥೆ ಫೋರ್ ವಿಂಡ್ಸ್ ನಲ್ಲಿ ಸೀನಿಯರ್ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರಿಗೆ 69 ವರ್ಷ ಪ್ರಾಯವಾಗಿದ್ದು, ಪತ್ನಿ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.