ಮಂಗಳೂರು:-  ಮಾಜಿ ಸರಕಾರಿ ಮುಖ್ಯ ಸಚೇತಕರು ಹಾಗೂ ಮಾಜಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜರವರು ಇಂದು, ಮಂಗಳೂರಿನ ಪಡಿತರ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸರಕಾರವು ಘೊಶಿಸಿ ದಂತಹ 10 ಕೆಜಿ ಅಕ್ಕಿ ಗೋಧಿ ,ತೊಗರಿಬೇಳೆ ಯಾವುದು ಕೂಡ ಈವರೆಗೆ ಪಡಿತರ ಅಂಗಡಿಗೆ ತಲುಪಿಲ್ಲ ಎಂದು ಅಂಗಡಿಯ ಮಾಲೀಕರು ಶಾಸಕರಿಗೆ ಮನವರಿಕೆ ಮಾಡಿದರು.