ಉಡುಪಿ ಏಪ್ರಿಲ್ 8 : ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಮತ್ತು ಕರ್ನಾಟಕ ಸರಕಾರ ಕಾರ್ಮಿಕ ಇಲಾಖೆ ಉಡುಪಿ ಇವರ ಸಹಭಾಗಿತ್ವದಲ್ಲಿ ರೆಡ್ ಕ್ರಾಸ್ ಭವನದಲ್ಲಿ ಕೊರೊನಾ ವೈರಸ್ ಜಾಗೃತಿಯ ಮಾಹಿತಿಯನ್ನೊಳಗೊಂಡ ಕೊರೊನಾ 19 ವಾಹನವು ಉಡುಪಿ ಜಿಲ್ಲೆಯ 7 ತಾಲೂಕುಗಳಲ್ಲಿ ವಾಸವಾಗಿರುವ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್, ಸೋಪ್ ಮತ್ತು ಮಾಹಿತಿ ಕರಪತ್ರಗಳನ್ನು ವಿತರಿಸುವ ಮತ್ತು ಜಾಗೃತಿಗಾಗಿ ಡಾ. ಸುಧೀರ್ ಚಂದ್ರ ಸೂಡಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರು ರೆಡ್ ಕ್ರಾಸ್ ಲಾಂಛನವನ್ನು ಬೀಸುವ ಮೂಲಕ ಚಾಲನೆಯನ್ನು ನೀಡಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾಸ್ವತ್ರೆಯ ಸರ್ಜನ್ ಡಾ. ಮಧುಸೂದನ್ ನಾಯಕ್‌ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿಯವರು ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಬಾಲಕೃಷ್ಣ ಎಮ್ ರವರು ಮಾತನಾಡಿ ಈಗಾಗಲೇ ಜಿಲ್ಲಾಧಿಕಾರಿ ಜಿ. ಜಗದೀಶ್‌ರವರು , ಭಾರತೀಯ ರೆಡ್ ಕ್ರಾಸ್ ಸಂಸ್ಥೆಯವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ರೆಡ್ ಕ್ರಾಸ್ ವತಿಯಿಂದ ಕೊರಾನಾ ವೈರಸ್ ಜಾಗೃತಿ ಅಭಿಯಾನದ ಅಂಗವಾಗಿ ಸಿದ್ಧಪಡಿಸಿರುವ ಕರಪತ್ರ, ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ಬಿಡುಗಡೆಗೊಳಿಸಿ, ಈಗಾಗಲೇ 80 ಕ್ಕೂ ಮಿಕ್ಕಿ ಗ್ರಾಮ ಪಂಚಾಯತ್‌ಗಳನ್ನು ಕ್ರಮಿಸಿ ಸುಮಾರು 15000 ಕ್ಕೂ ಮಿಕ್ಕಿ ಅಸಂಘಟಿತ ಕಾರ್ಮಿಕರ ಮತ್ತು ಹಿಂದುಳಿದ ಪರಿಶಿಷ್ಟ ವರ್ಗ, ಪರಿಶಿಷ್ಠ ಪಂಗಡ ಮತ್ತು ಕಟ್ಟಡ ಕಾರ್ಮಿಕರಿಗೆ 55 ಕ್ಕೂ ಮಿಕ್ಕಿ ಅಧೀಕೃತ ನೊಂದಾವಣೆ ಗೊಂಡಿರುವ ಕೋವಿಡ್ 19 ರೆಡ್ ಕ್ರಾಸ್ ಸ್ವಯಂ ಸೇವಕರಿಗೆ ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತರಬೇತಿಯನ್ನು ಭಾರತೀಯ ರೆಡ್ ಕ್ರಾಸ್ ಕಾರ್ಮಿಕ ಇಲಾಖೆ ಮತ್ತು ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಏರ್ಪಡಿಸಲಾಗಿದೆ.
ಈಗಾಗಲೇ ಮುಖ್ಯವಾಗಿ ಗುರುತಿಸಲ್ಪಟ್ಟ ಅಸಂಘಟಿತ ಕಾರ್ಮಿಕರ ವಲಸೆ ಕೇಂದ್ರಗಳಲ್ಲಿ ಪ್ರಮುಖವಾದ ಉಡುಪಿ ಬೀಡಿನಗುಡ್ಡೆ, ನಿಟ್ಟೂರು, ಅಲೆವೂರು ಮಣಿಪಾಲದ ಪ್ರಗತಿನಗರ, ರಾಜೀವ್ ನಗರ, ಸಂತೆಕಟೆ, ಬ್ರಹ್ಮಾವರ ಲೇಬರ್ ಕಾಲನಿ ಮತ್ತು ಸುತ್ತಲಿದ್ದ ಕಾರ್ಮಿಕರಿಗೆ, ಉಡುಪಿ ತಾಲೂಕಿನ ಬೋರ್ಡ್ ಹೈಸ್ಕೂಲು, ಹೆರಾಡಿ ಗಾಂಧಿನಗರ ಕೊಲನಿ, ಬೈಕಾಡಿ ಕೊಲನಿ ಮತ್ತು ಬಾರ್ಕೂರು ರುಕ್ಮಿಣಿ ಶೆಡ್ತಿ ಸರಕಾರಿ ಕಾಲೇಜು, ಕುಂದಾಪುರ ಮತ್ತು ಬೈಂದೂರು ತಾಲೂಕಿನ 18 ಗ್ರಾಮ ಪಂಚಾಯತ್‌ಗಳಿಗೆ, ಕುಂದಾಪುರ ಬ್ಯಾಕ್ ರ‍್ರ್ಡ ಕ್ಲಾಸ್ ಹಾಸ್ಟೆಲ್, ತಲ್ಲೂರು ಕಾಲನಿ, ಹೆಮ್ಮಾಡಿ ಕಾಲನಿ, ನಾಡಾ ಶೇಣಪುರ ಪ್ಯಾಕ್ಟರಿ ವಕರ‍್ಸ್ ಕಾಲೋನಿ, ಬೈಂದೂರು ತಾಲೂಕು ಅಫೀಸ್, ಅಂಬೇಡ್ಕರ್ ನಗರ, ಮರವಂತೆ ಕಾಲೋನಿ, ಕಂಬದಕೋಣೆ ಹೈವೇ ಕಾಲೋನಿ, ಕಾಳವರ ವರದರಾಜ್ ಸರಕಾರಿ ಕಾಲೇಜು, ರೈಲ್ವೆ ಸ್ಟೇಶನ್, ಮೂಡಲಕಟ್ಟ÷ ಕಾಲೋನಿ, ಜನತಾ ಕಾಲೋನಿ ಬಸ್ರೂರು, ನೇರಳಕಟ್ಟೆ, ಕೋಟೇಶ್ವರ ಜನತಾ ಕಾಲೋನಿ, ಉಡುಪಿಯ ಮೂಡನಿಡಂಬೂರಿನ ಬಿಜಾಪುರ ಕಾಲೋನಿ, 15,000 ಕ್ಕೂ ಮಿಕ್ಕಿ ಜನರಿಗೆ ಮಾಸ್ಕ್, ಸೋಪು, ಸ್ಯಾನಿಟೈಸರ್, ಮತ್ತು ಕೊರೊನಾ ನಿಯಂತ್ರಣ ಕುರಿತ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಕರಪತ್ರಗಳನ್ನು ವಿತರಿಸಲಾಗಿರುತ್ತದೆ. ಇನ್ನು 10,000 ಕ್ಕೂ ಮಿಕ್ಕಿ ಮಾಸ್ಕ್, ಸೋಪು, ಸ್ಯಾನಿಟೈಸರ್‌ಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ಗೌರವ ಕಾರ್ಯದರ್ಶಿ ಶ್ರೀ ಬಾಲಕೃಷ್ಣ ಶೆಟ್ಟಿ ಕೆ ಮತ್ತು ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ಪ್ರವೀಣ್, ಸತ್ಯನಾರಾಯಣ ಮತ್ತು ಪ್ರಸನ್ನ ಕುಮಾರ್ ಮತ್ತು ರೆಡ್ ಕ್ರಾಸ್ ಆಡಳಿತ ಮಂಡಳಿ ಸದಸ್ಯರುಗಳಾದ ಡಾ. ಕೆ. ಕೆ. ಕಲ್ಕೂರ, ಡಾ. ಉಮೇಶ್ ಪ್ರಭು, ಸನ್ಮತ್ ಹೆಗ್ಡೆ, ಜಯರಾಮ್ ಆಚಾರ್ಯ ಉಪಸ್ಥಿತರಿದ್ದರು.