ಕೊರೋನಾ ಕೊರೋನಾ ಕೊರೋನಾ
ಎಂದು ಕೂಗುತ್ತಲಿರ ಬೇಡಣ್ಣಾ
ಸ್ವಲ್ಪ ಹೊರಗೆ ಬಂದು ಸುತ್ತಾಡಿ
ನೋಡು, ನಿನ್ನ ಒಳಗೆ ಬರುವೆನಣ್ಣಾ
ಕಣ್ಣಿಗೆ ಕಾಣುತ್ತಿಲ್ಲಾ, ಕೈಗೆ ಸಿಗುತ್ತಿಲ್ಲಾ
ಎಂದು ಜಂಬ ತೋರಬೇಡಾ
ನಿನ್ನೊಳ ನಾ ಹೊಕ್ಕಿ , ಯಮಪುರಿಗೆ
ಕಳುಹಿಸುವೆನೆಂದು ಮರೆಯಬೇಡಾ
ಹಣ ಅಂತಸ್ತು ಇದೆ
ಎಂದು ಬೀಗಬೇಡ ಮೂಡಾ
ಜಗವೀಗ ನನ್ನೆದುರು
ಮಂಡಿಯೂರಿದೆ ಕಣ್ತೆರೆದು ನೋಡಾ
ಭಾರತೀಯ ನಾನು ನನಗೇನು
ಭಯ ಎಂಬ ಅಹಃ ಬೇಡಾ
ನಿನ್ನ ಜಾಗರೂಕತೆಯಲ್ಲಿ ನೀನಿರದಿದ್ದರೆ
ನಾ ಬರುವೆ ನಿನ್ನ ಮನೆಗೆ ಯಮನ ಕೂಡಾ..
- By ಮಾಗಿದ ಮನಸ್ಸು