ಜೂನ್ 1 ರಿಂದ ದ.ಕ.ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳ ಓಡಾಟ ಪ್ರಾರಂಭ ವಾಗಲಿದೆ ಎಂದು ತಿಳಿದು ಬಂದಿರುತ್ತದೆ. ಸರಕಾರ ಹಾಗೂ ಜಿಲ್ಲಾಡಳಿತ ಇದಕ್ಕೆ ಅವಶ್ಯಕವಾಧ ಪರವಾನಿಗೆ ಹಾಗೂ ಅನುಮತಿಯನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಬಸ್ಸುಗಳ ಸಂಚಾರ ಸಾಮಾನ್ಯ ಜನರಿಗೆ ಅತೀ ಅಗತ್ಯವಾಗಿರುತ್ತದೆ. ಬಡವರು, ಕೂಲಿ ಕಾರ್ಮಿಕರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಬಸ್ಸುಗಳಿಗೆ ತೀರಾ ಅವಲಂಭಿಸಿರುತ್ತಾರೆ. ಬಸ್ಸುಗಳನ್ನು ಆರಂಭಿಸುವ ಸಂದರ್ಭದಲ್ಲಿ ಕೆಲವು ಜಾಗರೂಕತೆಯನ್ನು ಜನರು ಹಾಗೂ ಜಿಲ್ಲಾಡಳಿತ ವಹಿಸಬೇಕಾಗುತ್ತದೆ. ಮುಖ್ಯವಾಗಿ ಬಸ್ಸುಗಳ ಚಾಲಕರು ಹಾಗೂ ನಿರ್ವಾಹಕರ ಆರೋಗ್ಯದ ಬಗ್ಗೆ ಜಿಲ್ಲಾಡಳಿತ ಹಾಗೂ ಮಾಲಕರು ಕಾಳಜಿ ವಹಿಸಬೇಕು. ಬಸ್ಸುಗಳಲ್ಲಿ ಪ್ರಯಾಣಿಸುವವರ ಬಗ್ಗೆಯೂ ಕೂಡಾ ಜಾಗ್ರತೆ ವಹಿಸಬೇಕು. ಬಸ್ಸುಗಳಲ್ಲಿ ಪ್ರಯಾಣಿಸುವವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿಗಳು ಬಸ್ಸಿನ ನಿರ್ವಾಹಕರಿಗೆ ಇಲ್ಲದಿರುವುದರಿಂದ, ನಿರ್ವಾಹಕರು ಬಹಳ ಎಚ್ಚರದಿಂದ ಕಾರ್ಯ ನಿರ್ವಹಿಸಬೇಕು. ಮುಖ್ಯವಾಗಿ ಮಾಲಕರು ಬಸ್ಸಿನ ಚಾಲಕ ಹಾಗೂ ನಿರ್ವಾಹಕರ ಬಗ್ಗೆ ತೀರ್ವ ಕಾಳಜಿ ವಹಿಸಬೇಕು. ಅವರಿಗೆ ಬೇಕಾದ ಆರೋಗ್ಯ ಸುರಕ್ಷತಾ ಕಿಟ್ , ಆರೋಗ್ಯ ವಿಮಾ ಸೌಲಭ್ಯ ಒದಗಿಸಬೇಕು.   ಬಸ್ಸುಗಳ ಚಾಲಕರು , ನಿರ್ವಾಹಕರು ಬಡಪಾಯಿಗಳಾಗಿದ್ದು , ಅವರು ಕೋವಿಡ್ ಲಾಕ್ ಡೌನ್ ನಿಂದಾಗಿ ಆರ್ಥಿಕತೆಯ ತೀರ್ವ ತೊಂದರೆಯಲ್ಲಿದ್ದಾರೆ.  ಈಗಾಗಲೇ ಸಾಲ ಬಾದೆಗಳಿಂದ ತತ್ತರಿಸಿ ಹೋಗಿ, ತಮ್ಮ ಜೀವನವನ್ನು ಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ಆದ್ದರಿಂದ ಇಂತಹ ಸಂಕಷ್ಟದ ಸಮಯದಲ್ಲಿ ಸರಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ವಿಶೇಷವಾಗಿ ಒತ್ತು ನೀಡಿ , ಬಸ್ಸು ಚಾಲಕ, ನಿರ್ವಾಹಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ  ಅವರಿಗೆ ಬೇಕಾಗುವ ಅಗತ್ಯತೆಗಳನ್ನು ಒದಗಿಸಿ , ಬಸ್ಸುಗಳ ಸಂಚಾರವನ್ನು ಸುಗಮ ರೀತಿಯಲ್ಲಿ ಸಂಚರಿಸುವಂತೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಮಾಜಿ ಶಾಸಕ ಶ್ರೀ.ಜೆ.ಆರ್.ಲೋಬೊ ಸರಕಾರವನ್ನು ಮತ್ತು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.