ಮಂಗಳೂರು (ಜೂ 25): ದ.ಕ. ಜಿಲ್ಲೆಯಲ್ಲಿ ಗುರುವಾರದಂದು ಮತ್ತೆ 29 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಒಟ್ಟು 203 ಮಂದಿಯ ವರದಿ ಲಭ್ಯವಾಗಿದ್ದು, ಈ ಪೈಕಿ 29 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತರ ಪೈಕಿ 19 ಮಂದಿ ವಿದೇಶದಿಂದ ಆಗಮಿಸಿದವರಾಗಿದ್ದಾರೆ. ಸೌದಿ ಅರೇಬಿಯಾ, ಮಸ್ಕತ್, ಕತಾರ್, ಶಾರ್ಜಾದಿಂದ ಆಗಮಿಸಿದವರಾಗಿದ್ದಾರೆ. ಒಬ್ಬರಲ್ಲಿ ಐ ಎಲ್ ಐ, ಇಬ್ಬರಲ್ಲಿ ಎಸ್ ಎ ಎ ಆರ್ ಐ ಪ್ರಕರಣವಾದರೆ, ಮತ್ತೊಬ್ಬರು ಮುಂಬೈನಿಂದ ಆಗಮಿಸಿದವರಲ್ಲಿ ಸೊಂಕು ಇರುವುದು ದೃಢಪಟ್ಟಿದೆ.ರೋಗಿ ಸಂಖ್ಯೆ 9588, 9589 ಇಬ್ಬರು ಸೋಂಕಿತರ ಸಂಪರ್ಕದಿಂದಾಗಿ 6 ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ ಎಂದು ದ.ಕ. ಜಿಲ್ಲಾ ಆರೋಗ್ಯ ಇಲಾಖೆ ನೀಡಿರುವ ವರದಿಯಲ್ಲಿ ಉಲ್ಲೇಖವಾಗಿದೆ. ಎಲ್ಲಾ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ಆರಂಭಿಸಲಾಗಿದೆ. ನಾಗರಿಕರು ಕೊರೊನಾ ಬಗ್ಗೆ ಆತಂಕಗೊಳ್ಳದೆ, ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.
ಉಡುಪಿ (ಜೂ 25): ಜಿಲ್ಲೆಯಲ್ಲಿ ಮತ್ತೆ 14 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ 10 ಮಂದಿ ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದು, ಉಳಿದ ನಾಲ್ವರ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.ಇನ್ನು ಜಿಲ್ಲೆಯ ಕೊರೊನಾ ಸೋಂಕಿತರ ಸಂಖ್ಯೆ 1116 ಕ್ಕೆ ಏರಿಕೆಯಾಗಿದೆ. ಆದರೆ, ಈ ಪೈಕಿ ಬಹುತೇಕರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಸಕ್ರೀಯ ಕೊರೊನಾ ಸೋಂಕಿತರು ಕೇವಲ 94
ಮಂದಿ ಮಾತ್ರ. 1020 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.