ಮಂಗಳೂರು:- "ರಾಜ್ಯ ಕರಾವಳಿ ಪ್ರದೇಶಕ್ಕೆ ಸೀಮಿತವಾಗಿರುವ Commissioner of Income Tax ಕಚೇರಿಯನ್ನು ವರ್ಗಾವಣೆ ಗೊಳ್ಳುವ ಅಧಿಕೃತ ನಿರ್ಣಯದ ಹಿನ್ನಲೆಯಲ್ಲಿ ಮಾತನಾಡಿದ ಜೆ.ಆರ್.ಲೋಬೊ ರವರು ದಕ್ಷಿಣ ಕನ್ನಡ ಜಿಲ್ಲೆ ಅಭಿವೃದ್ಧಿ ಆಗಲು ಶ್ರೀನಿವಾಸ್ ಮಲೈ ರವರು ಟಿ ಎಮ್ ಎ ಪೈಯವರು,ಜನಾರ್ದರಾ ಪೂಜಾರಿ, ಜಾರ್ಜ್ ಫೆರ್ನಾಂಡಿಸ್, ಆಸ್ಕರ್ ಫೆರ್ನಾಂಡಿಸ್ ಸತತವಾಗಿ ನಮ್ಮ ದ.ಕ ಜಿಲ್ಲೆ ಅಭಿವೃದ್ಧಿ ಆಗಲು ಪಣ ತೊಟ್ಟಿದ್ದಾರೆ.ಆದರೆ ಇಂದು ಇಡೀ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಸರ್ವನಾಶ ವಾಗುತ್ತದೆ ಬಿಜೆಪಿ ಪಕ್ಷದ ಜಯಕ್ಕಾಗಿ. ಇತ್ತಿಚಿನ ಪತ್ರಿಕೆಯಲ್ಲಿ ಗೋವಾ ಹಾಗೂ ಕರ್ನಾಟಕ ರಾಜ್ಯ ಕರಾವಳಿ ಪ್ರದೇಶಕ್ಕೆ ಸೀಮಿತವಾಗಿರುವ Commissioner of Income Tax ಕಚೇರಿಯನ್ನು ಗೋವಾದ ಪಣಜಿಗೆ ವರ್ಗಾವಣೆ ಮಾಡಲು ಈಗಾಗಲೇ ಅಧಿಕೃತ ಪ್ರಕಟಣೆಯಾಗಿದೆ".
"ಗೋವಾಕ್ಕೆ ಹೋಲಿಸಿದರೆ ದ.ಕ ಜಿಲ್ಲೆಯಲ್ಲಿ ಕೈಗಾರಿಕೆಗಳು ವ್ಯಾಪಾರಗಳು ಮುಂತಾದವುಗಳಲ್ಲಿ ಯಾವುದೇ ರೀತಿಯಲ್ಲಿ ಹೋಲಿಕೆಗಳಿಲ್ಲ. ಇಂತಹ ಕೇಂದ್ರದಲ್ಲಿರುವ Commissioner of Income Tax ಕಚೇರಿಯನ್ನು ಪಣಜಿಗೆ ವರ್ಗಾಯಿಸಬೇಕಾದರೆ ಇದರ ಹಿಂದೆ ಇರುವ ಕಾರಣ ಹಾಗೂ ಕೈವಾಡ ಯಾರದ್ದು? ಯಾವ ಕಾರಣಕ್ಕಾಗಿ ವರ್ಗಾಯಿಸ ಬೇಕೆಂದು ಪ್ರಶ್ನಿಸಿದರು".
"ಭಾರತ ಸರಕಾರದ ಆರ್ಥಿಕ ಸಚಿವಾಲಯದಿಂದ ನಮ್ಮ ಜಿಲ್ಲೆಗೆ ನಿರಂತರವಾಗಿ ಅನ್ಯಾಯವಾಗುತ್ತದೆ. ಬ್ಯಾಂಕುಗಳನ್ನು ಮಾರ್ಜ್ ಮಾಡಿ ಹಣಕಾಸು ವಲಯವನ್ನು ಸಂಪೂರ್ಣವಾಗಿ ನಾಶ ಮಾಡಿದ. ಇದಕ್ಕೆ ಕಾರಣ ಬಿಜೆಪಿ ಹಾಗೂ ಆರ್ಥಿಕ ಸಚಿವಾಲಯ ಯಾವ ಕಾರಣಕ್ಕೆ ಈ ರೀತಿಯಾಗಿ ಮಾಡುತ್ತಿದ್ದಾರೆ. ಎ೦ದು ಜೆ. ಆರ್ ಲೋಬೋ ಪ್ರಶ್ನಿಸಿದ್ದಾರೆ".
ಮುಂದೆ ಮಾತನಾಡಿದ ಅವರು "ವಿಮಾನ ನಿಲ್ದಾಣ ಅಭಿವೃದ್ಧಿ ಮಾಡುವ ಬದಲು ಅದನ್ನು ಅಡಾನಿಯವರಿಗೆ ಮಾರಿಬಿಟ್ಟರು. ಅಷ್ಟೇ ಅಲ್ಲದೆ, ನಮ್ಮ ಜಿಲ್ಲೆಯ ರೈಲ್ವೆ ಸಚಿವರು ಮಂಗಳೂರು ರೈಲ್ವೆ ನಿಲ್ದಾಣವನ್ನು ಜಾಗತಿಕ ಮಟ್ಟದ ರೈಲ್ವೆ ನಿಲ್ದಾಣವನ್ನಾಗಿ ಅಭಿವೃದ್ಧಿ ಪಡಿಸುತ್ತೇನೆ ಎ೦ದು ಘೋಷಣೆ ಮಾಡಿದ್ದರು. ಆದರೆ ಯಾವುದೇ ರೀತಿಯಲ್ಲಿ ಅಭಿವೃದ್ಧಿ ನಡೆದಿಲ್ಲ ಆದುದರಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿಯವರಿಂದ ಕೊಡುಗೆಯೇನು?" ಎ೦ದು ಪ್ರಶ್ನಿಸಿದ್ದಾರೆ.
"ನಾವು ಸಾರ್ವಜನಿಕರು ಭಾವನೆಗಳಿಗೆ ಮರುಳಾಗುವುದು ಬೇಡ, ಆರ್ಥಿಕ ಸ್ಥಿತಿಗತಿಗೆ ಕಣ್ತಿರೆಯಬೇಕಾಗಿದೆ. ಸಂಪೂರ್ಣವಾಗಿ ನಿರ್ಣಾಮವಾಗುತ್ತಿರುವ ನಮ್ಮ ಹೆಮ್ಮೆಯ ಜಿಲ್ಲೆ ಸoಪೂರ್ಣವಾಗಿ ನಾಶವಾಗುವ ಪರಿಸ್ಥಿತಿಗೆ ಬಂದು ನಿಂತಿದೆ.ಹಾಗಾಗಿ ಜನರು ಒಗ್ಗೂಡಿ ದ.ಕ ಜಿಲ್ಲೆಯ ಅಭಿವೃದ್ಧಿಗೆ ಮುಂದಾಗುವ ಮತ್ತು ಬಿಜೆಪಿ ಸರಕಾರ ತನ್ನ ರಾಜಕೀಯ ಮರೆತು ಜಿಲ್ಲೆಯ ಅಭಿವೃದ್ಧಿಗೆ ತನ್ನ ಚಿಂತನೆ ನಡೆಸಬೇಕಾಗಿದೆ" ಎಂದು ವಿನಂತಿಸಿದ್ದಾರೆ.