ಮಂಗಳೂರು (ಅಕ್ಟೋಬರ್ 03):- ದಕ್ಷಿಣ ಕನ್ನಡ ಜಿಲ್ಲೆಯು ಪ್ರವಾಸೋದ್ಯಮಕ್ಕೆ ಪೂರಕವಾದ ಕಡಲ ತೀರಗಳು, ನದಿ ತೀರಗಳು, ಧಾರ್ಮಿಕ ಪ್ರವಾಸಿ ಕೇಂದ್ರಗಳು, ಬೆಟ್ಟ-ಗುಡ್ಡಗಳು, ಕೋಟೆ-ಕೊತ್ತಲಗಳು, ಗಿರಿ ಕಂದರಗಳು, ವಸ್ತು ಸಂಗ್ರಹಾಲಯ, ಪಾರಂಪರಿಕ ಕಟ್ಟಡ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಹೊಂದಿದ ಸುಂದರ ಪ್ರವಾಸಿ ಜಿಲ್ಲೆಯಾಗಿದೆ.

       ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಪ್ರವಾಸೋದ್ಯಮ ಪಾಲುದಾರರಾದ ಹೋಟೆಲ್ ಹಾಗೂ ರೆಸ್ಟೋರೆಂಟ್, ಟೂರ್ ಆ್ಯಂಡ್ ಟ್ರಾವೆಲ್ ಅಪರೇಟರ್ಸ್, ಹೋಂ-ಸ್ಟೇ ಮಾಲೀಕರನ್ನೊಳಗೊಂಡಂತೆ  ಸ್ಥಳೀಯ ನಾಗರೀಕರು, ಸಾರ್ವಜನಿಕರು, ಉದ್ಯಮಿಗಳು, ಸ್ವ-ಸಹಾಯ ಸಂಘಗಳಿಂದ  ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಉತ್ತಮ ಸಲಹೆ ಸೂಚನೆಗಳನ್ನು ಪಡೆಯುವುದು ಅಗತ್ಯವಾದ್ದರಿಂದ  ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆಸಕ್ತ, ಅಭಿರುಚಿ ಹೊಂದಿರುವವರು ಅಕ್ಟೋಬರ್  31 ರೊಳಗೆ ತಮ್ಮ ಸಲಹೆ ಸೂಚನೆಗಳನ್ನು ಸಹಾಯಕ ನಿರ್ದೆಶಕರು, ಪ್ರವಾಸೋದ್ಯಮ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ನಂ: 02, ಒಂದನೇ ಮಹಡಿ, ಮಂಗಳೂರು ಮಹಾನಗರ ಪಾಲಿಕೆ ವಾಣಿಜ್ಯ ಸಂಕೀರ್ಣ, ಲಾಲ್‍ಬಾಗ್, ಮಂಗಳೂರು ಕಚೇರಿಗೆ  ತಲುಪಿಸಬಹುದಾಗಿದೆ.

     ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ: 0824-2453926  ಸಂಪರ್ಕಿಸಲು ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರಿಂದ ಪ್ರಕಟಣೆಯನ್ನು ಹೊರಡಿಸಲಾಗಿದೆ.