ಧರ್ಮಸ್ಥಳ: ಸಂಸ್ಥೆಯು ಪ್ರಾಯೋಜಿಸಿದ ಸ್ವ-ಸಹಾಯ ಸಂಘಗಳ ಸದಸ್ಯರಿಗೆಆರ್ಥಿಕ ಸಬಲೀಕರಣದಜೊತೆಗೆ ಸಾಮಾಜಿಕ ಹಾಗೂ ವೈಯಕ್ತಿಕ ಸಬಲೀಕರಣಕ್ಕಾಗಿ ನಿರಂತರವಾಗಿಅಗತ್ಯ ಮಾಹಿತಿಗಳನ್ನು ಒದಗಿಸಕೊಡಲಾಗುತ್ತದೆ.ಇದಕ್ಕಾಗಿ ಈಗಾಗಲೇ “ನಿರಂತರ ಪ್ರಗತಿ” ಎಂಬ ಮಾಸ ಪತ್ರಿಕೆಯನ್ನು ಪ್ರಕಟಗೊಳಿಸಲಾಗುತ್ತಿದೆ.ಅಲ್ಲದೆ ಮಹಿಳಾ ಸಮಾವೇಶ, ವಿಚಾರ ಸಂಕಿರಣ, ತರಬೇತಿ ಪ್ರಾತ್ಯಕ್ಷಿಕೆಗಳ ಮೂಲಕ ಅನೇಕ ಮಾಹಿತಿ ಕಾರ್ಯಕ್ರಮಗಳನ್ನು ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಒದಗಿಸಲಾಗುತ್ತಿದೆ. ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕವೂ ಮಹಿಳೆಯರ ದೈನಂದಿನ ಜೀವನದ ಅನುಕೂಲಕ್ಕಾಗಿ ಕೇಂದ್ರ ಸಭೆಗಳ ಮೂಲಕ ಪ್ರಸಕ್ತ ದಿನಗಳಿಗೆ ಪೂರಕ ವಿಚಾರಗಳನ್ನು ಚರ್ಚಿಸಿ ಮನನ ಮಾಡಲಾಗುತ್ತದೆ. ಈ ದಿಕ್ಕಿನಲ್ಲಿಮತ್ತೊಂದು ಮಹತ್ತರವಾದ ಹೆಜ್ಜೆಯನ್ನುಇಡಲಾಗುತ್ತಿದ್ದು ಶ್ರದ್ಧಾ ಅಮಿತ್‍ರವರ ಮಾರ್ಗದರ್ಶನದಲ್ಲಿ You Tube ಚಾನೆಲ್‍ನ್ನುಇಂದುಪ್ರಾರಂಭಮಾಡಲಾಯಿತು. ಸಾಮಾಜಿಕಅಂತರ್ಜಾಲದಲ್ಲಿ ಅನೇಕ ಮಾಹಿತಿಗಳು ಲಭ್ಯವಿದ್ದು ಇದರಲ್ಲಿ ಮಹಿಳೆಯರಿಗೆ ಪೂರಕವಾಗಿರುವ ಮಾಹಿತಿಗಳನ್ನು ಆಯ್ಕೆ ಮಾಡಿ ಅವರಿಗೆ ತಲುಪಿಸುವ ಪ್ರಯತ್ನಗಳನ್ನು ಮಾಡುವುದಕ್ಕಾಗಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿರುವ ಅನೇಕ ಸಂಸ್ಥೆಗಳಲ್ಲಿ ಇರುವ ಮಾಹಿತಿ ಸಂಪನ್ಮೂಲಗಳನ್ನು ಸದಸ್ಯರಿಗೆತಲುಪಿಸುವುದಕ್ಕಾಗಿ ಪ್ರತ್ಯೇಕ ಚಾಲೆನ್‍ನ್ನು ಮಾಡಲಾಗಿದೆ.
ಈ ಚಾನೆಲ್‍ನ ಮೂಲಕ ಗ್ರಾಮೀಣ ಭಾಗದ ಮಹಿಳೆಯರ ದೈನಂದಿನ ಜೀವನಕ್ಕೆ ಪೂರಕವಾದ ಮಾಹಿತಿಕ್ರೋಢೀಕರಣ ಮಾಡಲಾಗುತ್ತದೆ.ಮಹಿಳೆಯರು ಮನೆಯಲ್ಲಿಯೇ ಕುಳಿತು ತಮಗೆಉಪಯೋಗಕ್ಕೆ ಬರುವ ವಿಚಾರಗಳನ್ನು ತಿಳಿದುಕೊಳ್ಳಬಹುದು.ಆಪ್ತ ಸಮಾಲೋಚನೆ, ಮಕ್ಕಳ ಮಾನಸಿಕ ಬೆಳವಣಿಗೆಗಳು, ಇತ್ಯಾದಿ ವಿಚಾರಗಳ ಕುರಿತು ಮಾಹಿತಿ.
ಮನೆಯಲ್ಲಿ ತರಕಾರಿ ಬೆಳೆಯುವ ವಿಧಾನ, ಕೈತೋಟರಚನೆ, ಟೆರೆಸ್‍ಗಾರ್ಡನ್, ಮನೆಯ ತ್ಯಾಜ್ಯಗಳಿಂದ ಸಾವಯವಗೊಬ್ಬರ ತಯಾರಿ, ಮನೆ ನಿರ್ವಾಹಣೆ ಕುರಿತು ಮಾಹಿತಿ, ಯೋಗಾಸನಗಳ ಕುರಿತು ಕಿರುಚಿತ್ರ, ಕೋವೀಡ್-19 ಸಂಧರ್ಭ ಸ್ವಚ್ಚತೆ, ಅಂತರ ಕಾಯ್ದುಕೊಳ್ಳುವಿಕೆ ಮತ್ತು ಸಾಮಾಜಿಕ ಅಂತರದ ಮಹತ್ವ, ಸರಕಾರಿ ಯೋಜನೆಗಳನ್ನು ಪಡೆದುಕೊಳ್ಳುವ ಕುರಿತು ಮಾಹಿತಿ, ನಮ್ಮ ಸಂಸ್ಥೆಯ ಕಾರ್ಯಕ್ರಮಗಳ ಕುರಿತು ಮಾಹಿತಿ, ತನ್ನನ್ನುತಾನು ಪ್ರೀತಿಸುವ ಮತ್ತು ಗೌರವಿಸುವ ಕುರಿತು ಮಾಹಿತಿ, ಮಕ್ಕಳಿಗಾಗಿ ಸುಭಾಷಿತ, ಮೌಲ್ಯಧಾರಿತ ಕಥೆಗಳು, ಮಹಿಳೆಯರು ಓದಬಹುದಾದ ಪುಸ್ತಕಗಳ ಕುರಿತು ಮಾಹಿತಿ ಮುಂತಾದ ವಿಚಾರಗಳನ್ನು ಈ You Tube ಚಾನೆಲ್‍ನಲ್ಲಿ ಪ್ರಸ್ತುತ ಪಡಿಸಲಾಗುತ್ತದೆ.
ಈ ಚಾನೆಲ್‍ನನ್ನು ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರು, ಶ್ರದ್ಧಾ ಅಮಿತ್‍ರವರ ಸಮ್ಮುಖದಲ್ಲಿYou Tube ಚಾನೆಲ್ ಬಿಡುಗಡೆ ಮಾಡಲಾಯಿತು. ಈ ಸುಸಂಧರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.