ಧರ್ಮಸ್ಥಳ:ನದಿಗಳು ನಿತ್ಯ ಚಲನಶೀಲವಾಗಿದ್ದು ಕ್ರಿಯಾಶೀಲವಾಗಿರುತ್ತವೆ. ನದಿಗಳ ಉಗಮ ಸ್ಥಾನದಿಂದ ಸಮುದ್ರ ಸೇರುವವರೆಗೂ ಹಲವು ನದಿ-ತೊರೆಗಳನ್ನು ಸೇರಿಸಿಕೊಂಡು ತಮ್ಮಉಭಯ ಮಗ್ಗುಲುಗಳಲ್ಲಿ ಜನರಿಗೆಉಪಯುಕ್ತವಾಗುತ್ತವೆ.
ದಕ್ಷಿಣಕನ್ನಡಜಿಲ್ಲೆಯಜೀವನದಿ ಎಂದೇಕರೆಯಲ್ಪಡುವ ನೇತ್ರಾವತಿ ನದಿಯ ಉಗಮಸ್ಥಾನ ಕುದುರೆಮುಖ ಪರ್ವತ ಶ್ರೇಣಿಯ ಎಳನೀರು ಘಾಟಿಯ ಬ0ಗ್ರಬಲಿಗೆ ಕಣಿವೆಆಗಿದೆ.
ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳದ ಮೂಲಕ ಹರಿದು ಹೋಗುವ ನೇತ್ರಾವತಿ ನದಿ ಪುಣ್ಯನದಿ ಎಂದು ಮಾನ್ಯತೆ ಹೊಂದಿದ್ದು ಧರ್ಮಸ್ಥಳಕ್ಕೆ ಬರುವ ಭಕ್ತರು ನದಿಸ್ನಾನ ಮಾಡಿದೇವರದರ್ಶನಕ್ಕೆ ಹೋಗುವುದು ಸಂಪ್ರದಾಯವಾಗಿದೆ.
ನೇತ್ರಾವತಿ ನದಿಯುಉಪ್ಪಿನಂಗಡಿಯಲ್ಲಿಕುಮಾರಧಾರ ನದಿಯೊಂದಿಗೆ ಸಂಗಮವಾಗಿ ಬಂಟ್ವಾಳದ ಮೂಲಕ ಹರಿದು ಮಂಗಳೂರಿನಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.
ಮಳೆಗಾಲದಲ್ಲಿ ನದಿ ನೀರಿನೊಂದಿಗೆ ಮರಳು, ತ್ಯಾಜ್ಯ, ಮುರಿದು ಬಿದ್ದ ಮರದ ತುಂಡುಗಳು ಬರುವುದರಿಂದ ಕೃತಕ ನೆರೆ ಉಂಟಾಗುತ್ತದೆ.ನದಿಯ ಉಭಯ ಮಗ್ಗುಲಲ್ಲಿ ವಾಸಿಸುವ ಜನರಿಗೆ ಅವರ ಮನೆ ಹಾಗೂ ಕೃಷಿಗೂ ಹಾನಿಯಾಗುವ ಸಾಧ್ಯತೆ ಇರುತ್ತದೆ.ಮಳೆಗಾಲದಲ್ಲಿ ಈ ರೀತಿ ಅಲ್ಲಲ್ಲಿ ಕೃತಕ ನೆರೆಉಂಟಾಗುತ್ತದೆ.ಕಳೆದ ವರ್ಷ ಮಳೆಗಾಲದಲ್ಲಿ ಬೆಳ್ತಂಗಡಿ ತಾಲೂಕಿನ ದಿಡುಪೆ, ಕಿಲ್ಲೂರು, ಚಾರ್ಮಾಡಿ, ಕೊಳಂಬೆ ಮೊದಲಾದ ಕಡೆಗಳಲ್ಲಿ ನೆರೆಯಿಂದಾಗಿ ಅಪಾರ ಹಾನಿ ಉಂಟಾಗಿತ್ತು.
ಪುಣ್ಯನದಿ ನೇತ್ರಾವತಿ ದಕ್ಷಿಣಕನ್ನಡಜಿಲ್ಲೆಯ ಜೀವನದಿ ಎಂದೇಕರೆಯಲ್ಪಡುತ್ತದೆ.ಮಂಗಳೂರಿಗೆ ಕುಡಿಯುವ ನೀರುಒದಗಿಸುವ ಮೂಲವೇ ನೇತ್ರಾವತಿ ನದಿ.
ಬೆಳ್ತಂಗಡಿ, ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನಜನರುಕುಡಿಯುವ ನೀರು, ಕೃಷಿ ಹಾಗೂ ತೋಟಗಳಿಗೆ ನೇತ್ರಾವತಿ ನದಿ ನೀರನ್ನು ಬಳಸುತ್ತಾರೆ.
ಧರ್ಮಸ್ಥಳಧಲ್ಲಿ ನೇತ್ರಾವತಿ ಸ್ನಾನಘಟ್ಟದಲ್ಲಿ ನದಿಯಲ್ಲಿ ಮರಳು, ಹೂಳು, ತ್ಯಾಜ್ಯವಸ್ತುಗಳು ತುಂಬಿಕೊಂಡು ನದಿನೀರಿನ ಸುಗಮ ಹರಿವಿಗೆ ಅಡಚಣೆಯಾಗುತ್ತದೆ.ಇದರಿಂದ ನದಿಯ ಎರಡೂ ಬದಿಗಳಲ್ಲಿ ಮಣ್ಣಿನ ಸವೆತ ಆಗುತ್ತದೆ.ಅಧಿಕ ನೆರೆ ಬಂದಾಗ ನದಿಯುತನ್ನ ಹರಿವಿನ ದಿಕ್ಕನ್ನು ಬದಲಾಯಿಸುವ ಸಾಧ್ಯತೆಇದೆ.
ನದಿಯಲ್ಲಿ ತುಂಬಿಕೊಂಡಿರುವ ಮರಳು, ತ್ಯಾಜ್ಯ ಹಾಗೂ ಇತರ ವಸ್ತುಗಳನ್ನು ಆಗಾಗ ತೆಗೆದಲ್ಲಿ ನದಿ ಸ್ವಚ್ಛವಾಗಿ ನೀರಿನ ಸುಗಮ ಹರಿವಿಗೆ ಅನುಕೂಲವಾಗುತ್ತದೆ.ಈ ದಿಸೆಯಲ್ಲಿ "ನೇತ್ರಾವತಿ" ನದಿಗೆ ಕಾಯಕಲ್ಪ ನೀಡಬೇಕಾಗಿದೆ.