ಧರ್ಮಸ್ಥಳ: ಭಾರತ ಸರಕಾರದ ಮಾನ್ಯ ಪ್ರಧಾನ ಮoತ್ರಿಗಳಾದ ಶ್ರೀಯುತ ನರೇoದ್ರ ಮೋದಿಯವರ ಆಶಯದoತೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ: ಡಿ. ವೀರೇoದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ , ಭಾರತ ಸರ್ಕಾರದ ಆಯುಷ್ ಮoತ್ರಾಲಯ ಇದರ ನಿರ್ಧೇಶನದಲ್ಲಿ “ನನ್ನಜೀವನ-ಯೋಗಜೀವನ” ಮನೆಯೇ ಮೊದಲ ಯೋಗಚಾವಡಿ” ಎoಬ ವಿಭಿನ್ನ ಶೀರ್ಷಿಕೆಯಡಿ ಸಧೃಡ - ಸಶಕ್ತ - ಸ್ವಾಸ್ತ್ಯಜೀವನಕ್ಕಾಗಿಯೋಗ ಎoಬ ಪರಿಕಲ್ಪನೆಯಲ್ಲಿ ಕುಟುoಬದ ಸದಸ್ಯರೆಲ್ಲ ರೂತಮ್ಮ ಮನೆಯಲ್ಲಿಯೇ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳುವ ಮೂಲಕ 6ನೇ ವಿಶ್ವಯೋಗ ದಿನವನ್ನು ವಿಜೃoಭಣೆಯಿoದ ಆಚರಿಸಲಾಗುವುದು.  ಜೂನ್21 ರ0ದು ಬೆಳಗ್ಗೆ 7 ರಿ0ದ 8 ಗ0ಟೆಯವರೆಗೆ ಮನೆಯವರೆಲ್ಲರೂ ಸೇರಿಯೋಗ ಪ್ರದರ್ಶನ ಮಾಡುವoತೆ ಅರಿವು ಮೂಡಿಸಲಾಗಿದೆ.

ಉದ್ದೇಶ:

ಕಳೆದ 5 ವರ್ಷಗಳಿoದ ವಿಶ್ವಯೋಗ ದಿನವನ್ನು ಬೇರೆ ಬೇರೆ ಸoಸ್ಥೆಗಳ ಪ್ರತಿನಿಧಿಗಳು, ಶಾಲಾ-ಕಾಲೇಜಿನ ಮಕ್ಕಳನ್ನು ತರಬೇತುಗೊಳಿಸಿ ಒoದೇ ವೇದಿಕೆಯಲ್ಲಿಯೋಗ ಪ್ರದರ್ಶಿಸುವ ಮೂಲಕ ಆಚರಿಸುತ್ತಿದ್ದೇವು.ಆದರೆ ಈ ವರುಷಯೋಗವು ಮನೆ ಮನೆಗಳಲ್ಲಿ ಪ್ರಾರoಭವಾಗಬೇಕು ಅರ್ಥಾತ್ ಯೋಗ ಗುರುಗಳು ಮೊದಲುತಮ್ಮ ಮನೆಯವರಲ್ಲಿಯೋಗವನ್ನು ಪರಿಚಯಿಸಿ ತನ್ನ ಕುಟುoಬದಲ್ಲಿ ಅರಿವು ಮೂಡಿಸಿ, ಎಲ್ಲರೂಯೋಗವನ್ನುಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎoಬ ಮಹತ್ತರ ಉದ್ದೇಶದಿoದ ಈ ಶೀರ್ಷಿಕೆಯನ್ನು ಅಳವಡಿಸಲಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯಡಾ: ಡಿ. ವೀರೇoದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ 6ನೇ ವಿಶ್ವಯೋಗ ದಿನದoದು ನಡೆಯಲಿರುವ ಚಟುವಟಿಕೆಗಳು:

1.ಶ್ರೀ ಧ.ಮ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ದೇಶವ್ಯಾಪಿ ಪಸರಿಸಿರುವ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃoದದವರನ್ನೋಳಗೊoಡು ಎಲ್ಲರೂ ತಮ್ಮತಮ್ಮ ಮನೆಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಯೋಗಾಭ್ಯಾಸ ಮಾಡುವ ಮೂಲಕ ದೇಶದ ಎಲ್ಲಾ ರಾಜ್ಯಗಳಲ್ಲಿನ ಸುಮಾರು ಸಾವಿರಕ್ಕೂ ಹೆಚ್ಚಿನ ಮನೆಗಳಲ್ಲಿ ವಿಶ್ವಯೋಗ ದಿನಾಚರಣೆಯು ಸoಭ್ರಮಿಸಲಿದೆ.

2.ಶ್ರೀ ಕ್ಷೇತ್ರ ಧರ್ಮಸ್ಥಳದ ಆಡಳಿತಕ್ಕೆ ಒಳಪಡುವ “ಯೋಗ ಮತ್ತು ಪ್ರಕೃತಿ ಚಿಕಿತ್ಸಾಆಸ್ಪತ್ರೆ ಶಾoತಿವನ ಹಾಗೂ ಸೌಖ್ಯವನ’ ಪರೀಕ ಇಲ್ಲಿನ ವಿಶ್ವವ್ಯಾಪಿ 20,000 ಕ್ಕೂ ಹೆಚ್ಚು ಸಾಧಕರು ಯೋಗಾಭ್ಯಾಸದ ಮೂಲಕ ವಿಶ್ವಯೋಗ ದಿನವನ್ನುಆಚರಿಸಲು ಕoಕಣಬದ್ಧರಾಗಿದ್ದಾರೆ.  ಅವರೆಲ್ಲರಿಗೆ ಬೇಕಾದ ಪೂರಕ ಮಾಹಿತಿಗಳನ್ನು, ಯೋಗ ದಿನದ ಉದ್ದೇಶಗಳನ್ನು ತಿಳಿಸಲಾಗಿದೆ.

3.1991ರಲ್ಲಿ ಪ್ರಾರ0ಭವಾದ ಯೋಗ ಮತ್ತು ನೈತಿಕ ಶಿಕ್ಷಣ ಸoಸ್ಥೆ ಶಾoತಿವನ ಟ್ರಸ್ಟ್ ರಾಜ್ಯದ ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಯೋಗ ತರಬೇತಿಯನ್ನು ನೀಡಿರುತ್ತದೆ. ಸುಮಾರು ಲಕ್ಷಕ್ಕೂ ಹೆಚ್ಚು  ವಿದ್ಯಾರ್ಥಿಗಳು ತರಬೇತಿಯ ಫಲಾನುಭವಿಗಳಾಗಿದ್ದಾರೆ. ಆ ಎಲ್ಲಾ ವಿದ್ಯಾರ್ಥಿಗಳು ಹಾಗೂ  ತರಬೇತುದಾರರು ಅವರವರ ಮನೆಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಯೋಗ ದಿನದoದು ಯೋಗಾಭ್ಯಾಸದೊಂದಿಗೆ ವಿಶ್ವಯೋಗ ದಿನವನ್ನುಆಚರಿಸಲಿದ್ದಾರೆ. ಉಪಯುಕ್ತ ಮಾಹಿತಿಗಳನ್ನು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನೀಡಲಾಗಿದೆ.

4.ನಮ್ಮರಾಜ್ಯದ10ಜಿಲ್ಲೆಯ10 ತಾಲೂಕುಗಳಲ್ಲಿಕರ್ನಾಟಕ ಸರಕಾರ ಮತ್ತು ಶಾoತಿವನ ಟ್ರಸ್ಟ್ ನಿoದ ನಡೆಸಲ್ಪಡುವಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಭಾಗಗಳು ಇವೆ.  ಅಲ್ಲಿನ ವೈದ್ಯರು ಫಲಾನುಭವಿ ಸಾಧಕರು ಸೇರಿ ಸುಮಾರು100 ಮನೆಗಳಲ್ಲಿ ಯೋಗಾಭ್ಯಾಸ ಮಾಡುವ ಮೂಲಕ್ ವಿಶ್ವಯೋಗ ದಿನದಆಚರಣೆ.

“ಯುಜ್ಯತೇ ಆನೇನ ಇತಿಯೋಗ:” ಎ0ಬ0ತೆ ಮನೆ ಮನೆಗಳಲ್ಲಿ, ಮನ ಮನಗಳಲ್ಲಿ ಯೋಗದ ಅರಿವು ಮೂಡಲಿ, ಸಧೃಡ ಸಮಾಜದ ನಿರ್ಮಾಣವಾಗಲಿ ಎoಬ ಆಶಯದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ರಾಜರ್ಷಿ ಡಾ: ಡಿ. ವೀರೇ0ದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಈ ಬಾರಿಯ6ನೇ ವಿಶ್ವಯೋಗ ದಿನ ಅರ್ಥಪೂರ್ಣವಾಗಿ ಆಚರಣೆಗೊಳ್ಳಲಿದೆ.

ವಿಶ್ವಆರೋಗ್ಯ ಸoಸ್ಥೆ ಯೋಗದ ಪ್ರಾಮುಖ್ಯತೆಯನ್ನುಅರಿತುಆರೋಗ್ಯ ಸoಸ್ಥೆಯ ಆದೀನದಲ್ಲಿ ಬರುವಎಲ್ಲಾ ದೇಶಗಳಲ್ಲಿ ಯೋಗಕ್ಕೆ ಮಾನ್ಯತೆ ನೀಡುವ ದೃಷ್ಠಿಯಿoದ ಜಾಗತಿಕ ಸಮಿತಿಯೋoದನ್ನು ರಚನೆ ಮಾಡಿದ್ದು ಈ ಸಮಿತಿಗೆ ಶ್ರೀ ಧರ್ಮಸ್ಥಳ ಮoಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಪ್ರಾoಶುಪಾಲರಾದ ಶ್ರೀಯುತ ಡಾ: ಪ್ರಶಾoತ್ ಶೆಟ್ಟಿಯವರು ನೇಮಕಗೊoಡಿದ್ದಾರೆ.

ವಿಶ್ವಯೋಗ ದಿನಾಚರಣೆಯ ಆಚರಣೆಗಾಗಿ ಸಮಿತಿಯನ್ನು ರಚಿಸಿದ್ದು ಈ ಸಮಿತಿಯ ಗೌರವ ಅಧ್ಯಕ್ಷರಾಗಿ ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸಂಪೂರ್ಣ ಮಾರ್ಗದರ್ಶನ ನೀಡುತ್ತಿದ್ದು ಹಾಗೂ ಕಾರ್ಯಾಧ್ಯಕ್ಷರಾಗಿ ಎಸ್.ಡಿ.ಯಂ ಎಜುಕೇಶನ್ ಸೊಸೈಟಿಯ ಕಾರ್ಯಾದರ್ಶಿಗಳಾದ ಡಿ.ಹರ್ಷೇಂದ್ರ ಕುಮಾರ್‍ರವರು ಆಗಾಗ ಸಲಹೆ ನೀಡುತ್ತಿದ್ದಾರೆ. ಎಸ್.ಡಿ.ಯಂ ಎಜುಕೇಶನ್ ಸೊಸೈಟಿಯ ಕಾರ್ಯಾದರ್ಶಿಗಳಾದ  ಡಾ.ಯಶೋವರ್ಮರವರು, ಉಪಾಧ್ಯಕ್ಷರಾಗಿ, ಶಾಂತಿವನ ಟ್ರಸ್ಟ್  ಕಾರ್ಯಾದರ್ಶಿಗಳಾದ ಶ್ರೀ. ಸೀತಾರಾಮ ತೊಲ್ಪಡಿತ್ತಾಯ ಅವರು ಸಮಿತಿಯ ಸಂಘಟಣಾ ಕಾರ್ಯಾದರ್ಶಿಯಾಗಿ ಎಲ್ಲಾರೀತಿಯಲ್ಲೂ ಸಹಕಾರ ನೀಡುತ್ತಿದ್ದಾರೆ.

ಇಂದಿನ ಪತ್ರಿಕಗೋಷ್ಢಿಯಲ್ಲಿ ಭಾರತ ಸರಕಾರದ ವಿಶ್ವಯೋಗ ದಿನಾಚರಣೆಯ ಸಮಿತಿಯ ಸದಸ್ಯರು ಹಾಗೂ ಕಾಲೇಜಿನ ಪ್ರಾಂಶುಪಾಲರುಡಾ: ಪ್ರಶಾoತ್ ಶೆಟ್ಟಿ ಹಾಗೂ ಶ್ರೀ.ಧ.ಮ ಯೋಗ ಮತ್ತು ನ್ಯೆತಿಕ ಶಿಕ್ಷಣ ಯೋಜನೆಯ ನಿರ್ದೇಶಕರಾದ ಡಾ.ಶಶಿಕಾಂತ ಜೈನ್, ಕಾಲೇಜಿನ ಡೀನ್‍ಗಳಾದ ಡಾ.ಶಿವಪ್ರಸಾದ್ ಶೆಟ್ಟಿ, ಡಾ.ಸುಜಾತ, ಡಾ. ಗೀತ ಹಾಗೂ ಸದಸ್ಯರುಗಳಾದ ಶ್ರೀ.ಉದಯ ಸುಬ್ರಮಣ್ಯ, ಡಾ.ಆಶ್ವಿನ್, ಡಾ.ಅರುಣ್ ಉಪಸ್ಥಿತರಿದ್ದಾರೆ.