ರೋಮಾಂಚನ.

ಸಂಜೆಯಲಿ

ನದಿಯ ತೀರದಲಿ

ನಾನಲೆಯುತಿರಲು|

ಬೀಸುಗಾಳಿಗೆ

ಎದ್ದ ಅಲೆಗಳು

ಬಾಗುಬಾಗುತ

ಸಾಗುತಿರಲು|

ನಯದಿಸಾಗುತ

ಲಯದಿಕೆಣಕಲು

ಬಿಸಿಲ ಕರವ

ಚಾಚಿನೇಸರ

ನೀಲವೇಣಿಗೂ

ಲಜ್ಚೆ ತರಿಸಿ

ತಡವುತಿಹನು ಅಲೆಗಳ|

ಅಲೆಯ ಕುಲುಕಿಗೆ

ಹರಿವ ನೀರದು

ತಡೆವ ಕಲ್ಲಿಗೂ

ಒರಸಿ ಸಾಗಿದೆ.

ನೊರೆಯು ಹೊಮ್ಮಿದೆ

ಫಳಫಳ.|

ಜಲವು ಸಾಗಲು

ಬಿರುಸು ಮೈಯ

ಹರಿತದಂಚಿನ

ಸೀಳು ಶಿಲೆಯಲಿ

ನಾದಹೊಮ್ಮಿದೆ


ಜುಳುಜುಳು.

ಮೊನಚುಕಳೆಯುತ

ನುಣುಪು ಪಡೆಯುವ

ಶಿಲೆಗೆ ಆಯಿತು

ಜಲಾಲಿಂಗನ.

ಅಲೆಯನೊರಸಿದೆ ಲರು

ನೀಡಲು ಎನ್ನ ಕೆನ್ನೆಗೆ

ಚುಂಬನ

ಧಣಿದ ಮನಸ್ಸಿಗೂ

ಆಯಿತು

ಹೊಸ

ರೋಮಾಂಚನ.

- ಮಾರ್ಸೆಲ್‌ ಡಿಸೋಜ, ಬೊಂದೆಲ್‌