ಮಂಗಳೂರಿನ ಬಲ್ಮಠದಲ್ಲಿರುವ ಸನ್ಯಾಸಿಗುಡ್ಡೆ ನಿವಾಸಿ ಜೋನ್ ವಿಕ್ಟರ್ ಲೊಬೋ 69 ವರ್ಷ ಅವರು ತಾ. 15-1-2020ರಂದು ನಿಧನ ಹೊಂದಿದರು, ಮೃತರು ಮಂಗಳೂರು ಡೆಪ್ಯೂಟಿ ಕಮಿಷನರ್ ಕಚೇರಿಯಲ್ಲಿ ಪ್ರೊಟೋಕಾಲ್ ಸೆಕ್ಷನ್‍ನಲ್ಲಿ ಅಧಿಕಾರಿ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಹೊಂದಿದ್ದರು. ಪ್ರಸ್ತುತ ನಿರ್ಮಿತಿ ಕೇಂದ್ರ ಸುರತ್ಕಲ್‍ನ ಸುಪರಿಇನ್‍ಟೆಂಡೆಂಟ್(ಅಧೀಕ್ಷಕರು) ಆಗಿದ್ದರು. ಬೆಂದೂರು ಚರ್ಚಿನಲ್ಲಿ ಸುಮಾರು 21 ವರ್ಷ ವಾರ್ಡಿನ ಮುಖ್ಯಸ್ಥರಾಗಿದ್ದು, ಪತ್ನಿ, ಮಗಳನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಸ್ಥಳೀಯ ಕಾರ್ಪೋರೇಟರ್ ವಿನಯರಾಜ್ ಸಂತಾಪ ಸೂಚಿದ್ದಾರೆ.