ನೀನೊಂದು ಸ್ವಾರ್ಥದಾ ಗಂಟು!

ಮನುಜಾ.. ನೀನೊಂದು ಸ್ವರ್ಥದಾ ಗಂಟು!


ಹಣದ ಮೋಹಕೆ ಸಿಲುಕಿ 

ಅನುಭವಿಸುತ್ತಿದ್ದರೂ ಜಗವು

ಬಿಡಲು ನೀನೊಲ್ಲೆ ಕಾಂಚನಾಳ ಒಲವು

ನೀನೊಂದು ಸ್ವರ್ಥದಾ ಗಂಟು!


ಹೆಣಗಳು ಉರುಳಿದರೂ ಅತ್ತ

ಊಳಲು ಜಾಗವೇ ಇಲ್ಲಾ ಇತ್ತ

ಇರುವುದೀಗ ನಿನಗೆ ಬುತ್ತಿಯತ್ತ ಚಿತ್ತ

ನೀನೊಂದು ಸ್ವರ್ಥದಾ ಗಂಟು!


ಬೆಳೆವವನ ಬದುಕಲ್ಲೀಗ ಬರಗಾಲ

ಅಯ್ಯೋ! ಕಷ್ಟವಿನ್ನೂ ನಮ್ಮ ಉಳಿಗಾಲ

ಬೇಕು ಇನ್ನೂ ನಿನಗೆ ಗರಿಗರಿ ನೋಟು

ನೀನೊಂದು ಸ್ವರ್ಥದಾ ಗಂಟು!


ಜೀವವಿದ್ದರೆ ಜೀವನ

ಇದ ಅರಿತವನ ಜನ್ಮ ಪಾವನ

ತಿಳಿದಿಲ್ಲಾ ನಿನಗಿನ್ನೂ ಪರಿಸರದ ಋಣ ಏಕೆಂದರೆ ಮನುಜಾ.. ನೀನೊಂದು ಸ್ವರ್ಥದಾ ಗಂಟು!

                                    -ಮಾಗಿದ ಮನಸ್ಸು